ಬಾಗಲಕೋಟೆ : ಕ್ರಿಕೆಟ್ ಆಟದ ಜಗಳ ನಡೆದ ಹಿನ್ನೆಲೆಯಲ್ಲಿ ವೈಷಮ್ಯ ಬೆಳೆದು ತಲ್ವಾರ್ ನಿಂದ ಸ್ನೇಹಿತ ಹಾಗೂ ಆತನ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ವಿದ್ಯಾಗಿರಿಯಲ್ಲಿ (Bagalkot Vidyagiri) ನಡೆದಿದೆ.
ಶರಣಪ್ಪ ಮತ್ತು ವಿಜಯ್ ಎಂಬುವವರು ವಿದ್ಯಾಗಿರಿಯ ಎಂಬಿಎ ಕಾಲೇಜ ಹತ್ತಿರ ನಿಂತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇಬ್ಬರ ತಲೆ ಹಾಗೂ ಕೈಗಳಿಗೆ ತಲ್ವಾರ್‌ನಿಂದ ಹಲ್ಲೆ ನಡೆಸಲಾಗಿತ್ತು. ಸ್ಥಳಿಯರು ಇವರಿಬ್ಬರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ವಿಜಯ್ ಎರಡೂ ಕೈಗಳಿಂದ ತೀವ್ರ ರಕ್ತಸ್ರಾವ ಆಗಿದ್ದರಿಂದ ಗಂಭೀರವಾಗಿದ್ದು, ಹುಬ್ಬಳ್ಳಿಯ ಕರೆದೊಯ್ಯಲಾಗಿದೆ.
ವಿಜಯ್ ಬೇವೂರ್ ಸ್ನೇಹಿತರಾದ ವಿಠ್ಠಲ ಬಂಟನೂರು, ವಿಲಾಸ ಜಾಧವ್, ಬಳಿಗೇರ ಹಾಗೂ ಸಮೀರ್ ಮುಲ್ಲಾ ಎಂಬ ಯುವಕರು ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಠ್ಠಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದವರಿಗಾಗಿ ಬಲೆ ಬೀಸಲಾಗಿದೆ.








