ADVERTISEMENT
Thursday, July 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಕ್ರಿಕೆಟ್‌ ಶ್ರೀಮಂತ.. ಶ್ರೀಮಂತರು ನೋಡೋ ಆಟ… ಆಡೋದು ಮಾತ್ರ ಬಡವರ ಮಕ್ಕಳೇ..?

Cricket Is a Rich Man's Game Watched by the Wealthy, But Played by the Poor?

Shwetha by Shwetha
July 29, 2025
in Sports, ಕ್ರೀಡೆ
Share on FacebookShare on TwitterShare on WhatsappShare on Telegram

ಕ್ರಿಕೆಟ್‌ ಶ್ರೀಮಂತ.. ಶ್ರೀಮಂತರು ನೋಡೋ ಆಟ… ಆಡೋದು ಮಾತ್ರ ಬಡವರ ಮಕ್ಕಳೇ..?

ಹಿಂದೊಂದಿತ್ತು ಕಾಲ.. ಕ್ರಿಕೆಟ್‌ ಶ್ರೀಮಂತ ಕ್ರೀಡೆ.. ಕ್ರಿಕೆಟ್‌ ಶ್ರೀಮಂತರ ಆಟ… ಅಧಿಕಾರ ಇದ್ದವರು ಕ್ರಿಕೆಟ್‌ ಆಡ್ತಾರೆ..ದುಡ್ಡಿದವರು ಕ್ರಿಕೆಟ್‌ ಆಡಬಹುದು..! ಹೌದು, ನೂರಾರು ವರುಷಗಳ ಹಿಂದೆ ಕ್ರಿಕೆಟ್‌ ಆಟ ಬರೀ ಮೋಜಿನ ಆಟವಾಗಿತ್ತು. ಬ್ರಿಟಿಷ್‌ ಪಾರುಪತ್ಯ ಹೊಂದಿದ್ದ ದೇಶಗಳಲ್ಲಿ ಅಲ್ಲಿನ ಅಧಿಕಾರಿಗಳು ಟೈಮ್‌ ಪಾಸ್‌ಗಾಗಿ ಆಡುತ್ತಿದ್ದ ಆಟವೇ ಕ್ರಿಕೆಟ್‌..!
ದೊಡ್ಡವರು ಆಡುತ್ತಿದ್ದ ಆಟವನ್ನು ನಿಬ್ಬೆರೆಗಾಗಿ ನೋಡುತ್ತಿದ್ದ ಬಡವರ ಮಕ್ಕಳು ಚೆಂಡು – ಬ್ಯಾಟ್‌ನ ಸದ್ದಿಗೆ ಚಪ್ಪಾಳೆ ಹೊಡೆದು ಅವರನ್ನು ಹುರಿದುಂಬಿಸುತ್ತಿದ್ದರು. ಹೀಗೆ ಆಟವನ್ನು ನೋಡಿಕೊಂಡು ಗುರುವಿಲ್ಲದ ಏಕಲವ್ಯನಂತೆ ಕ್ರಿಕೆಟ್‌ ಆಟವನ್ನು ಕರಗತ ಮಾಡಿಕೊಂಡು ತಮ್ಮದೇ ದೇಶದ ತಂಡವನ್ನು ಕಟ್ಟಿಕೊಂಡಿದ್ದಾರೆ. ಇವತ್ತು ಕ್ರಿಕೆಟ್‌ ಜಗತ್ತಿನ ಎಂಟು- ಹತ್ತು ರಾಷ್ಟ್ರಗಳಲ್ಲಿ ಕ್ರಿಕೆಟ್‌ ಪ್ರಮುಖ ಕ್ರೀಡೆಯಾಗಿ ಬೆಳೆದಿರುವುದಕ್ಕೆ ಪ್ರಮುಖ ಕಾರಣ ಇಂಗ್ಲೀಷರು ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ಅವರನ್ನು ಕ್ರಿಕೆಟ್‌ ಜನಕರು ಎಂದು ಕರೆಯುವುದು. ಅಷ್ಟೇ ಅಲ್ಲ, ಆರಂಭದಲ್ಲಿ ಕ್ರಿಕೆಟ್‌ ಆಟಕ್ಕೆ ಒಂದು ನಿಯಮ, ಪಾಲಿಸಿಯ ಜೊತೆಗೆ ನೆರವಿನ ಹಸ್ತವನ್ನು ನೀಡಿದ್ದು ಕೂಡ ಬ್ರಿಟಿಷರು. ಕಾಲ ಬದಲಾದಂತೆ ಇಂಗ್ಲೆಂಡ್‌ ತಂಡಕ್ಕಿಂತ ಬಲಿಷ್ಠ ತಂಡಗಳು ರೂಪುಗೊಂಡವು. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗಿಂತಲೂ ಶ್ರೀಮಂತ ಕ್ರಿಕೆಟ್‌ ಮಂಡಳಿ ಭಾರತ/ ಬಿಸಿಸಿಐ ಈಗ ವಿಶ್ವ ಕ್ರಿಕೆಟ್‌ನ್ನು ಕೈ ಬೆರಳಿನಲ್ಲಿ ಆಡಿಸುತ್ತಿದೆ.
ಹಾಗಂತ ಭಾರತದಲ್ಲಿ ಕ್ರಿಕೆಟ್‌ ಎಂಬುದು ಬರೀ ಶ್ರೀಮಂತ – ಬಡವರ ಆಟವಲ್ಲ. ಎಲ್ಲರೂ ಜಾತಿ ಭೇದವಿಲ್ಲದೆ ಆಡುವ ಆಟ. ಇಲ್ಲಿಯವರೆಗೆ ಕ್ರಿಕೆಟ್‌ ಆಟಕ್ಕೆ ಧರ್ಮದ ಅಂಟು ಅಂಟಿಕೊಂಡಿಲ್ಲ. ಗಲ್ಲಿ ಗಲ್ಲಿಗಳಲ್ಲೂ ಕ್ರಿಕೆಟ್‌ ಆಟವನ್ನು ಆಡ್ತಾರೆ.. ಆಟವನ್ನು ಆಸ್ವಾದಿಸ್ತಾರೆ. ಹಾಗೇ ನೋಡಿದ್ರೆ ಇವತ್ತಿನ ದಿನಗಳಲ್ಲಿ ಕ್ರಿಕೆಟ್‌ ಆಟವನ್ನು ಶ್ರೀಮಂತರ ಆಟ ಎಂದು ಹೇಳ್ತಾರೆ.. ದುಡ್ಡಿದವರು ಮಾತ್ರ ತಮ್ಮ ಮಕ್ಕಳನ್ನು ಒಳ್ಳೆಯ ಕ್ರಿಕೆಟ್‌ ಅಕಾಡೆಮಿಗೆ ಸೇರಿಸ್ತಾರೆ. ಮಧ್ಯಮ, ಬಡ ವರ್ಗದ ಮಕ್ಕಳಿಗೆ ಕ್ರಿಕೆಟ್‌ ಆಟದ ತರಬೇತಿ ಪಡೆಯಲು ಸಾಧ್ಯವಿಲ್ಲ ಅಂತ ಹೇಳುವವರು ಇದ್ದಾರೆ.
ಆದ್ರೆ ಒಂದು ಮಾತು ನೆನಪಿಡಿ.. ನಿಜ ಎಲ್ಲರೂ ಹೇಳುವಂತೆ ಕ್ರಿಕೆಟ್‌ ಆಟವನ್ನು ಮೈದಾನದಲ್ಲಿ ನೋಡಲು ಶ್ರೀಮಂತರಿಗಷ್ಟೇ ಸಾಧ್ಯ. ದುಬಾರಿ ಬೆಲೆಯ ಟಿಕೆಟ್‌ ಕೊಟ್ಟು ಬಡವರು, ಮಧ್ಯಮ ಮಕ್ಕಳು ಹೈಫೈ ಸ್ಟ್ಯಾಂಡ್‌ನಲ್ಲಿ ಕುಳಿತುಕೊಂಡು ಪಂದ್ಯ ನೋಡಲು ಸಾಧ್ಯವಿಲ್ಲ. ಬಡವರು ಏನಿದ್ರೂ ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡಬೇಕು. ಅದು ಕೂಡ ರಾತ್ರಿ -ಹಗಲು ನಿದ್ದೆಗೆಟ್ಟು ಟಿಕೆಟ್‌ ಸಿಕ್ರೆ ಮಾತ್ರ. ಇಲ್ಲದಿದ್ರೆ ಮನೆಯಲ್ಲೇ ಟಿವಿ ನೋಡಿಕೊಂಡು ಪಂದ್ಯ ನೋಡ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹೊಸ ಟ್ರೆಂಡ್‌ ಶುರುವಾಗಿದೆ. ಪಬ್‌, ರೆಸಾರ್ಟ್‌ ಗಳಲ್ಲಿ ನೋಡುತ್ತಿದ್ದಾರೆ.
ಆದ್ರೆ ಅದು ಕೂಡ ಬಡವರ ಮಕ್ಕಳಿಗೆ ಗಗನ ಕುಸುಮವಾಗಿದೆ. ಹಾಗೋ ಹೀಗೋ ಟಿವಿಯಲ್ಲಿ ಮ್ಯಾಚ್‌ ನೋಡಿಕೊಂಡು ಕ್ರಿಕೆಟ್‌ ಆಡಬೇಕು.. ದೇಶದ ಪರ ಆಡಬೇಕು ಅಂತ ಬಡತನದ ಬೇಗೆಯಲ್ಲಿ ಅರಳಿದ ಅದೆಷ್ಟೋ ಕ್ರಿಕೆಟಿಗರು ವಿಶ್ವ ಕ್ರಿಕೆಟ್‌ನಲ್ಲಿ ರಾರಾಜಿಸುತ್ತಿರುವುದು ಹೆಮ್ಮೆಯ ವಿಷ್ಯ.
ಹಾಗೇ ನೋಡಿದ್ರೆ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಶ್ರೀಮಂತರ ಮಕ್ಕಳು ಆಡಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ರಣಜಿತ್‌ ಸಿಂಗ್‌, ಭೂಪಿಂದರ್‌ ಸಿಂಗ್‌, ಪಟೌಡಿ ಮೊದಲಾದ ಮಹಾರಾಜ ವಂಶಸ್ಥರು ಆಡಿದ್ದಾರೆ. ಇನ್ನುಳಿದಂತೆ ಮಧ್ಯಮ ಕ್ರಮಾಂಕ ಹಾಗೂ ಬಡವರ ಮಕ್ಕಳೇ ಕ್ರಿಕೆಟ್‌ ಆಡಿರೋದು. ೭೦-೮೦ರ ದಶಕದ ರನ್‌ ಮೆಷಿನ್‌ ಸುನೀಲ್‌ ಗವಾಸ್ಕರ್‌, ೧೯೮೩ರ ವಿಶ್ವಕಪ್‌ ಹೀರೋ ಕಪಿಲ್‌ ದೇವ್‌ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.
ಇನ್ನು ಕ್ರಿಕೆಟ್‌ ದೇವ್ರು ಸಾಹಿತಿಯ ಮಗ. ತಂದೆ ರಮೇಶ್‌ ತೆಂಡುಲ್ಕರ್‌ ಅಕ್ಷರ ಜೋಡಣೆ ಮಾಡಿದ್ರೆ, ಮಗ ಸಚಿನ್‌ ಮೈದಾನದಲ್ಲಿ ರನ್‌ ಮಳೆ ಸುರಿಸುತ್ತಾ, ದಾಖಲೆಗಳ ಮೇಲೆ ದಾಖಲೆ ಬರೆದು ವಿಶ್ವ ಕ್ರಿಕೆಟ್‌ನ ದೃಶ್ಯ ಕಾವ್ಯವನ್ನೇ ಚಿತ್ರಿಸಿದ್ದಾರೆ. ಇನ್ನು ಕಳೆದ ೨೫ ವರ್ಷಗಳಲ್ಲಿ ಟೀಮ್‌ ಇಂಡಿಯಾದಲ್ಲಿ ಹೆಚ್ಚು ಸದ್ದು ಮಾಡಿರೋದು ಬಡವರ ಮಕ್ಕಳೇ..! ಮುನಾಫ್‌ ಪಟೇಲ್‌ ನಿಂದ ಹಿಡಿದು ಇವತ್ತಿನ ಯಶಸ್ವಿ ಜೈಸ್ವಾಲ್‌ ತನಕ ಬೀದಿಯಲ್ಲಿ ಬೆಳೆದು ವಿಶ್ವ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ, ಸುರೇಶ್‌ ರೈನಾ, ಜಹೀರ್‌ಖಾನ್‌, ಭಜ್ಜಿ, ಸೆಹ್ವಾಗ್‌, ರೋಹಿತ್‌ ಶರ್ಮ, ಕೊಹ್ಲಿ ಕೂಡ ಮಾಮೂಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವವರು.
ಸದ್ಯದ ಟೀಮ್‌ ಇಂಡಿಯಾದಲ್ಲೂ ಅಷ್ಟೇ.. ಒಬ್ಬ ಕೃಷಿಕನ ಮಗ ಟೀಮ್‌ ಇಂಡಿಯಾದ ಸಾರಥಿಯಾಗಿದ್ದಾನೆ.. ಪಾನಿಪುರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಜೈಸ್ವಾಲ್‌ ಟೀಮ್‌ ಇಂಡಿಯಾದ ಆರಂಭಿಕ ಆಟಗಾರನಾಗಿದ್ದಾನೆ. ಉಪನ್ಯಾಸಕನ ಮಗ ಕೆ.ಎಲ್.‌ ರಾಹುಲ್‌ ತಂಡಕ್ಕೆ ಆಧಾರಸ್ತಂಭವಾಗಿದ್ದಾನೆ. ಸಣ್ಣ ಬಿಸಿನೆಸ್‌ ಮ್ಯಾನ್‌ ಮಗ ರಿಷಬ್‌ ಪಂತ್‌ ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾನೆ.. ಕಾವಲುಗಾರನ ಮಗ ಜಡೇಜಾ ತಂಡದ ಹಿರಿಯಣ್ಣನಾಗಿ ಕಾವಲುಗಾರನಾಗಿದ್ದಾನೆ. ಆಟೋ ರಿಕ್ಷಾ ಚಾಲಕನ ಮಗ ಮಹಮ್ಮದ್‌ ಸಿರಾಜ್‌ ತಂಡದ ಟ್ರಂಪ್‌ ಕಾರ್ಡ್‌ ಬೌಲರ್‌ ಆಗಿದ್ದಾನೆ. ಹೀಗೆ ಭಾರತದಲ್ಲಿ ಅನೇಕ ಯುವ ಕ್ರಿಕೆಟಿಗರು ಬಡತನ, ಹಸಿವು, ಆರ್ಥಿಕ ಸಮಸ್ಯೆಯ ನಡುವೆಯೂ ಕ್ರಿಕೆಟ್‌ ಆಟವನ್ನು ಉಸಿರಾಗಿಸಿಕೊಂಡು ಟೀಮ್‌ ಇಂಡಿಯಾ ಪರ ಆಡಿದವರಿದ್ದಾರೆ. ರಣಜಿ, ಐಪಿಎಲ್‌ನಲ್ಲೂ ಶೈನ್‌ ಆಗಿದ್ದಾರೆ.
ಇದನ್ನೆಲ್ಲಾ ನೋಡಿದಾಗ ಬಿಸಿಸಿಐ ಶ್ರೀಮಂತ ಕ್ರಿಕೆಟ್‌ ಮಂಡಳಿ.. ಭಾರತದಲ್ಲಿ ಕ್ರಿಕೆಟ್‌ ಆಟ ಶ್ರೀಮಂತವಾಗಿದೆ. ಹಾಗೇ ಬಡವರ ಮಕ್ಕಳು ಕೂಡ ಕ್ರಿಕೆಟ್‌ ಆಡಿ ಶ್ರೀಮಂತರಾಗಿದ್ದಾರೆ. ಇದಕ್ಕೆ ಅನ್ನೋದು ಪ್ರತಿಭೆ ಅನ್ನೋದು ಯಾರ ಸ್ವತ್ತು ಅಲ್ಲ.. ಪ್ರತಿಭೆ, ಅವಕಾಶದ ಜೊತೆಗೆ ಬದ್ಧತೆ, ಶಿಸ್ತು ಅನ್ನು ಪಾಲಿಸಿಕೊಂಡಾಗ ಮಾತ್ರ ಕ್ರಿಕೆಟಿಗನಾಗಬಹುದು.. ಅದನ್ನು ಬಿಟ್ಟು ಕ್ರಿಕೆಟ್‌ ಆಟ ಅಂದ್ರೆ ಶ್ರೀಮಂತರ ಆಟ ಅನ್ನೋದೆಲ್ಲಾ ಸುಳ್ಳು.. ಹಾಗಂತ ಇದು ಭಾರತೀಯ ಕ್ರಿಕೆಟ್‌ನಲ್ಲಿ ಮಾತ್ರ ಅಲ್ಲ.. ಬೇರೆ ಬೇರೆ ಕ್ರಿಕೆಟ್‌ ಆಡುವ ದೇಶದಲ್ಲೂ ಕೂಡ ಬಡವರ ಮಕ್ಕಳೇ ಕ್ರೀಡೆಯಲ್ಲಿ ಯಶ ಸಾಧಿಸಿರುವುದು. ಇದು ಬೇರೆ ಕ್ರೀಡೆಗಳಲ್ಲೂ ಈ ರೀತಿಯ ಅನೇಕ ಉದಾಹರಣೆಗಳು ಸಿಗುತ್ತವೆ

Related posts

sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

July 29, 2026
saransh-jain-test-call-up-india-srilanka-2026

Teamindia- ತಂದೆಯ ಕನಸನ್ನು ನನಸು ಮಾಡಿರುವ 33ರ ಹರೆಯದ ಸರನ್ಶ್..!

July 29, 2026

ಸನತ್‌ ರೈ
+

ShareTweetSendShare
Join us on:

Related Posts

sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

by admin
July 29, 2026
0

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ " ಸತ್ಯ " ಸಾಧನೆಯ ಯಶೋಗಾಥೆ..! ಸರಿ...

saransh-jain-test-call-up-india-srilanka-2026

Teamindia- ತಂದೆಯ ಕನಸನ್ನು ನನಸು ಮಾಡಿರುವ 33ರ ಹರೆಯದ ಸರನ್ಶ್..!

by admin
July 29, 2026
0

"ನೀನು ಇನ್ನೂ ಚೆನ್ನಾಗಿ ಆಡಿದ್ರೆ ನಾನು ಬೇಗ ಗುಣಮುಖನಾಗುತ್ತೇನೆ". ಇದು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ತಂದೆ ತನ್ನ ಮಗನಿಗೆ ಬರೆದಿರುವ ಕೈಪಿಡಿಯ ಬರಹ. ತಂದೆಯ ಆಸೆಯಂತೆ ಮಗ ಇಂದು...

shilpa-shaila-commonwealth-games-bronze-medal-karnataka-para-athlete

ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ.

by admin
July 28, 2026
0

ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ..ಗ್ಲಾಸ್ಗೋ ಪೋಡಿಯಂನಲ್ಲಿ ಕರುನಾಡಿನ ರೈತನ ಮಗಳ...

rishikanta-singh-commonwealth-games-silver-medal-journey

Rishikantha singh – ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..!

by admin
July 28, 2026
0

ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..! ಅವನು ಶಾಲೆಗೆ ಹೋಗಿ ಓದಿದ್ದು ಬರೀ 8ನೇ...

aditya-patnaik-wins-gold-vios-championship-at-sepang-circuit

ರಾಷ್ಟ್ರೀಯ ಚಾಂಪಿಯನ್‌ ಆದಿತ್ಯನಿಗೆ ಅಂ.ರಾ. ರೇಸಿಂಗ್‌ನಲ್ಲಿ ಮೊದಲ ಜಯ!

by admin
July 27, 2026
0

- ಮಲೇಷ್ಯಾದ ಸೆಪಾಂಗ್‌ ಸರ್ಕ್ಯೂಟ್‌ನಲ್ಲಿ ನಡೆದ ರೇಸ್‌ ಗೆದ್ದ ಭಾರತದ ಯುವ ರೇಸರ್‌ ಆದಿತ್ಯ ಪಟ್ನಾಯಕ್‌ - ಗೋಲ್ಡ್ ವಿಯೊಸ್ ಚಾಂಪಿಯನ್‌ಶಿಪ್‌ನ 3ನೇ ಸುತ್ತಿನಲ್ಲಿ ಮುಂಬೈ ಯುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram