Crime : ಪತ್ನಿಯ ಮೇಲೆ ಅನುಮಾನಕ್ಕೆ ಇಬ್ಬರು ಮಕ್ಕಳನ್ನ ಕೊಂದ ತಂದೆ
ಪತ್ನಿಗೆ ಅನೈತಿಕ ಸಂಬಂಧಿವಿದೆ ಎಂದು ಅನುಮಾನಗೊಂಡು ತಂದೆಯೋರ್ವ ತನ್ಮನಿಬ್ಬರು ಮಕ್ಕಳನ್ನ ಹತ್ಯೆಗೈದಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ… ದೇವದುರ್ಗದ ಜಕ್ಲೇರದೊಡ್ಡಿಯಲ್ಲಿ ಘಟನೆ ನಡೆದಿದೆ..
ಶಿವರಾಜ್ (5) ರಾಘವೇಂದ್ರ (3) ಮೃತ ಮಕ್ಕಳು… ಆರೋಪಿ ತಂದೆ ಲಿಂಗಣ್ಣನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತ್ನಿಯೊಂದಿಗೆ ಜಗಳವಾಡಿದ್ದ ಈತ ಆಕೆಯ ತವರು ಮನೆಯಿಂದ ಮಕ್ಕಳನ್ನ ಕರೆದುಕೊಂಡು ಬಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ನಿತ್ಯ ಜಗಳವಾಡುತ್ತಿದ್ದ ಹಿನ್ನೆಲೆ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಶನಿವಾರ ಸಹ ಪತ್ನಿಯೊಂದಿಗೆ ಜಗಳವಾಡಿ ಮಕ್ಕಳನ್ನ ಮನೆಗೆ ಕರೆತಂದು ಕೊಲೆ ಮಾಡಿದ್ದಾನೆ.
ನೆರೆ ಹೊರೆಯವರ ಮಾಹಿತಿ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದು , ಆರೋಪಿಯನ್ನ ದೇವದುರ್ಗ ಪೊಲೀಸರು ಬಂಧಿಸಿದ್ದಾರೆ.. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ,ದಾಖಲಾಗಿದೆ..
Crime ,Father kills his two son’s doubting her wife’s affair








