ಅಕ್ರಮ ಸಂಬಂಧಕ್ಕೆ ಪುಟ್ಟ ಬಾಲಕನ ಕೊಲೆ – ಕೃತ್ಯದಲ್ಲಿ ಭಾಗಿಯಾಗಿದ್ದಳಾ ತಾಯಿ..?
ಅಕ್ರಮ ಸಂಭಂದಕ್ಕೆ ಪುಟ್ಟ ಬಾಲಕನನ್ನು ಕೊಂದಿದ್ದ ಪಾಪಿಗಳನ್ನ ಪೊಲೀಸರು ಬಂಧಿಸಿದ್ದು , ವಿಚಾರಣೆ ನಡೆಸುವಾಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.. ಮಗುವಿನ ಕೊಲೆಯ ಹಿಂದೆ ತಾಯಿಯ ಕೈವಾಡವಿರುವುದು ಬೆಳಕಿಗೆ ಬಂದಿದೆ. ಮಗುವಿನ ತಾಯಿ ಹಾಗು ರೌಡಿ ಶೀಟರ್ ಮತ್ತು ಆತನ ಪ್ರೇಯಸಿ ಮೂವರು ಸೇರಿ ಬಾಲಕನನ್ನ ಕೊಂದಿದ್ದಾರೆ.
ತಾಯಿಯ ಅಕ್ರಮ ಸಂಭಂದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಗನ ಕೊಲೆ ನಡೆದಿದೆ. ಬಾಲಕನ ಕೊಂದು ಶವವನ್ನ ತಮಿಳುನಾಡಿನ ಸಮೀಪ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬಂದಿದ್ದರು ಎನ್ನಲಾಗಿದೆ. ನಂತ್ರ ಮೂವರು ಸೇರಿ ಪೈಪ್ ನಿಂದ ಹಲ್ಲೆ ಮಾಡಿ ಆತನ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಾಲಕನ ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದಾಗ ಸಂಬಂಧಿಕರು ಆತ ಎಲ್ಲಿ ಎಂದು ವಿಚಾರಿಸಿದ್ದಾರೆ. ಬಳಿಕ ಅನುಮಾನ ಬಂದು ಪೊಲೀಸ್ ಠಾಣೆ ಗೆ ಮಗು ಮಿಸ್ಸಿಂಗ್ ಎಂದು ದೂರು ನೀಡಿದ್ರು ಪೊಲೀಸರ ತನಿಖೆ ವೇಳೆ ಮಗು ಕೊಂದು ತಮಿಳುನಾಡಿನಲ್ಲಿ ಬಿಸಾಕಿರೋದು ಪತ್ತೆಯಾಗಿದೆ.
ರಾಜ್ಯದಲ್ಲಿ ಹೆಚ್ಚಾಯ್ತು ಡೆಂಘಿ , ಚಿಕನ್ ಗುನ್ಯ ಪ್ರಕರಣಗಳು..!
ಕೊಲೆ ಪ್ರಕರಣದಲ್ಲಿ ತಮ್ಮ ಕೈವಾಡವಿರುವ ಬಗ್ಗೆ ಪೊಲಿಸರಿಗೆ ಗೊತ್ತಾಗ್ತಿದ್ದಂತೆ ಮೂವರೂ ಆರೋಪಿಗಳು ಸಹ ತಲೆ ಮರೆಸಿಕೊಂಡಿದ್ದರು. ಇದೀಗ ಅವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಮೈಕೋಲೇಔಟ್ ಪೊಲೀಸರು ಆರೋಪಿಗಳಾದ ಸುನೀಲ್, ಸಿಂಧೂ ಎಂಬುವವರನ್ನ ಬಂಧಿಸಿದ್ದಾರೆ.