ಕೆಟ್ಟ ತಾಯಿ ಇರಲ್ಲಾ ಅನ್ನೋ ಮಾತನ್ನೇ ಸುಳ್ಳು ಅಂತ ಸಾಬೀತು ಮಾಡಿದ್ದಾಳೆ ಈ ನೀಚ ತಾಯಿ..!
ಉತ್ತರಪ್ರದೇಶ : ಕೆಟ್ಟ ತಂದೆಯಿದ್ರೂ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಮಕ್ಕಳ ಮೇಲೆ ಆಪತ್ತು ಬಂದ್ರೆ ತನ್ನ ಪ್ರಾಣವೇ ಹೋಯಿತೇನೋ ಅಂತ ದೂಃಖ ಪಡ್ತಾರೆ ಅಮ್ಮಂದಿರು. ಏನೇ ಆದ್ರೂ ಎಲ್ಲಾ ನೋವು ನಮಗೆ ಇರಲಿ ಮಕ್ಕಳ ಮೇಲೆ ಯಾವುದೇ ತೊಂದರೆ ಬರಬಾರದು ಅಂದುಕೊಳ್ತಾಳೆ.
ಆನ್ ಲೈನ್ ಗ್ರಾಹಕರೇ ಎಚ್ಚರ..! ಮೊಬೈಲ್ ಬದಲಿಗೆ ಸೋಪ್ ಬರಬಹುದು..!
ಅದ್ರಲ್ಲೂ ಹೆಣ್ಮಕ್ಕಳನ್ನ ಸಮಾಜದ ಕೆಟ್ಟ ದೃಷ್ಟಿಯಿಂದ ಬಚ್ಚಿಡುತ್ತಾಳೆ. ಮಗಳ ಮೇಲೆ ಯಾರ ವಕ್ರ ಕಣ್ಣು ಬೀಳಬಾರದು ಹೀಗೆ ತಾಯಂದಿರು ರಕ್ಷಣೆ ಮಾಡೋದನ್ನ ನೋಡಿದ್ದೇವೆ. ಆದ್ರೆ ಉತ್ತರ ಪ್ರದೇಶದ ಮೀರತ್ ನಲ್ಲಿ ಒಬ್ಬ ಮಹಿಳೆ ತಾಯಿಯ ಹೆಸರಿಗೆ ಕಳಂಕ ಎಂಬಂತ ನೀಚ ಕೃತ್ಯ ಎಸಗಿದ್ದಾಳೆ.
ತನ್ನ ಸ್ವಂತ 15 ವರ್ಷದ ಅಪ್ರಾಪ್ತ ಮಗಳಿಗೆ ಮತ್ತು ಕೊಟ್ಟು ಆಕೆಯನ್ನ ಕರೆದೊಯ್ದು ಇಬ್ಬರು ಕಾಮುಕರ ಬಳಿ ಬಿಟ್ಟು ಬಂದಿದ್ದಾಳೆ. ಬಾಲಕಿಯನ್ನ ಒತ್ತೆಯಾಳಾಗಿಟ್ಟುಕೊಂಡು ಆಕೆಯ ಮೇಲೆ ಕಾಮುಕರು 1 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆರೋಪಿಗಳು ಆಕೆಯನ್ನು ಮಾರಾಟ ಮಾಡಲು ಮುಂದಾಗಿದ್ದಾಗ ಕೀಚಕರಿಂದ ಹೀಗೂ ಬಾಲಕಿ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ತನ್ನ ರಾಕ್ಷಸ ತಾಯಿ ಮತ್ತು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಮಹಿಳೆಗೆ ಒಟ್ಟು 3 ಬಾರಿ ಮದುವೆಯಾಗಿತ್ತು. ದುಡ್ಡಿನ ಆಸೆಗೆ ಬಿದ್ದು ಮಗಳನ್ನ ಕೀಚಕರ ಬಳಿ ಬಿಟ್ಟು ಬಂದಿದ್ದಾಳೆ.