ಆನ್ ಲೈನ್ ಗ್ರಾಹಕರೇ ಎಚ್ಚರ..!  ಮೊಬೈಲ್ ಬದಲಿಗೆ ಸೋಪ್ ಬರಬಹುದು..!

1 min read

ಆನ್ ಲೈನ್ ಗ್ರಾಹಕರೇ ಎಚ್ಚರ..!  ಮೊಬೈಲ್ ಬದಲಿಗೆ ಸೋಪ್ ಬರಬಹುದು..!

ಉತ್ತರಪ್ರದೇಶ : ಎಷ್ಟೋ ಬಾರಿ ಆನ್ ಲೈನ್ ನಲ್ಲಿ ಅನೇಕರು ಮೋಸ ಹೋಗಿರೋದನ್ನ ನೋಡಿದ್ದೇವೆ. ಕ್ವಾಲಿಟಿ , ಕ್ವಾಂಟಿಟಿ ವಿಚಾರ ಆಗಿರಬಹುದು, ನಾವು ಆರ್ಡರ್ ಮಾಡೋದೇ ಒಂದು ಬರೋದೆ ಒಂದಾಗಿರಬಹುದು ಎದೆಲ್ಲಾ ನಡೆದಿದೆ. ಮೊಬೈಲ್ ಬದಲಿಗೆ ಸೋಪು ಕಲ್ಲು, ಮೊಸರು ಪ್ಯಾಕೆಟ್ ಬಂದಿರುವಂತಹ ಉದಾಹರಣೆಗಳೂ ಇವೆ. ಅದೆಲ್ಲಾ ಬೈ ಮಿಸ್ ಆಗಿರಬಹುದು ಮೋಸವೂ ಆಗಿರಬಹುದು ಆದ್ರೆ ಅಲ್ಟಿಮೇಟ್ ಆಗಿ ಕಂಪನಿಯ ತಪ್ಪೆಂದೇ ಪರಿಣಿಸಲಾಗಿರುತ್ತೆ. ಆದ್ರೆ ಈ ಪ್ರಕರಣ ಡಿಫರೆಂಟ್.

ಹುಚ್ಚು….. ಅನ್ನೋದು ಇದನ್ನೇ ನೋಡಿ… ಚನ್ನಾಗಿರೋ ಮುಖವನ್ನ ಬೇಕಂತ್ಲೇ ಈ ರೀತಿ ಹಾಳು ಮಾಡಿಕೊಳ್ಳೋರನ್ನ ನೋಡಿದ್ದೀರಾ..!

ಯಾಕಂದ್ರೆ ಡೆಲಿವರಿ ಬಾಯ್ಸ್ ಪಂಗನಾಮ ಹಾಕಿದ್ದು, ಬಾಕ್ಸ್ ನಲ್ಲಿದ್ದ ಮೊಬೈಲ್ ಕದ್ದು, ಸೋಪ್ ಇಟ್ಟು ಡೆಲಿವರಿ ಮಾಡಿರುವ ಪ್ರಕರಣ ಇದೀಗ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಬೈ ಆನ್ ಲೈನ್‍ನಲ್ಲಿ ಮೊಬೈಲ್ ಆರ್ಡರ್ ಮಾಡಿದವರಿಗೆ ಡೆಲಿವರಿ ಬಾಯ್ಸ್ ಪಂಗನಾಮ ಹಾಕಿದ್ದಾರೆ.  ಬಾಕ್ಸ್ ನಲ್ಲಿದ್ದ ಮೊಬೈಲ್ ಕದ್ದು, ಸೋಪ್ ಇಟ್ಟು ಡೆಲಿವರಿ ಮಾಡಿದ್ದಾರೆ.

ಬಾಕ್ಸ್ ನಲ್ಲಿದ್ದ ಹೊಸ ಮೊಬೈಲ್ ಕದ್ದು, ಮೊಬೈಲ್ ಬದಲಿಗೆ ಸೋಪ್ ಇಟ್ಟು ಡೆಲಿವರಿ ಮಾಡಿದ್ದಾರೆ. ಇದೇ ರೀತಿ ಹಲವು ಗ್ರಾಹಕರಿಗೆ ಮೋಸ ಮಾಡಿದ್ದ ಗ್ಯಾಂಗ್ ಅನ್ನ ಪೊಲೀಸರು ಅಂದರ್ ಮಾಡಿದ್ದಾರೆ. ಫ್ಲಿಪ್‍ಕಾರ್ಟ್‍ನಿಂದ ಬುಕ್ ಮಾಡಿದವರಿಗೆ ಡೆಲಿವರಿ ಬಾಯ್ಸ್ ಮೋಸ ಮಾಡಿದ್ದು, ಡೀಲರ್ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಶಿವಂ, ಕರಣ್, ವಿಜಯ್, ಅಶೋಕ್, ನಾಗೇಂದ್ರ ಹಾಗೂ ಶಿವಂ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ. ಆರೋಪಿಗಳಿದ್ದ ಸ್ಥಳದಿಂದ 11 ಮೊಬೈಲ್ ಫೋನ್, ನಕಲಿ ಬಿಲ್ ಬುಕ್, ಪ್ಯಾಕಿಂಗ್ ಮಟಿರಿಯಲ್, ಟೇಪ್ ಕಟರ್ಸ್ ಹಾಗೂ ಸೋಪ್ ಬಾರ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಹಿಳೆ ಮೂಗಿಗೆ ಪಂಚಿಂಗ್ ಕೇಸ್ : ‘ಕಾನೂನಿನ’ ರಿವರ್ಸ್ ಪಂಚ್ ಕೊಟ್ಟ ZOMATO ಡೆಲಿವರಿ ಬಾಯ್..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd