ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪ್ರಾಪ್ತ ಆರೋಪಿ ಆತ್ಮಹತ್ಯೆಗೆ ಶರಣು
ಜಾರ್ಖಂಡ್ : 35 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಆರೋಪಿಗಳ ಪೈಕಿ ಒಬ್ಬನಾಗಿದ್ದ 15 ವರ್ಷದ ಅಪ್ರಾಪ್ತ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್ ದುಮ್ಕಾದಲ್ಲಿ ನಡೆದಿದೆ. ಬಂಧಿತರಾಗಿದ್ದ ಆರೋಪಿಗಳ ಪೈಕಿ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು ಈ ಹಿನ್ನೆಲೆ ಉಳಿದವರನ್ನೂ ಪ್ರತ್ಯೇಕವಾಗಿರಿಸಿ ಕ್ವಾರಂಟೈನ್ ನಲ್ಲಿಯೇ ಬಂಧಿಸಲಾಗಿತ್ತು. ಅಂತೆಯೇ ಬಾಲಕನನ್ನ ಮನೆಯಲ್ಲಿ ಕ್ವಾರಂಟೈನಲ್ಲಿರಿಸಿದ್ದ ವೇಳೆ ಆತ ನೇಣಿಗೆ ಶರಣಾಗಿದ್ದಾನೆ.
ಪ್ರಕರಣದ ಹಿನ್ನೆಲೆ : ಏಪ್ರಿಲ್ 13 ರಂದು ಜಕುಡಿದ ಮತ್ತಿನಲ್ಲಿದ್ದ 11 ಜನರ ಗ್ಯಾಂಗ್ ಮಹಿಳೆಯನ್ನ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. ಬಳಿಕ ಮಹಿಳೆ ಈ ಬಗ್ಗೆ ದುಮ್ಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ ಬಳಿಕ ಏಪ್ರಿಲ್ 16 ರಮದು ಆರೋಪಿಗಳನ್ನ ಪೊಲೀಸರು ಬಂಧಿಸಿ ತಪಾಸಣೆಗೆ ಒಳಪಡಿಸಿದ ನಂತರ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿತ್ತು. ನಂತರ ಪೊಲೀಸರು ಆರೋಪಿಗಳನ್ನ ಪ್ರತ್ಯೇಕವಾಗಿ ಐಸೋಲೇಷನ್ ನಲ್ಲಿರಿಸಿದ್ದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊರೊನಾ ಸಂಕಷ್ಟದಲ್ಲಿ ಭಾರತ – ಆಕ್ಸಿಜನ್ ಪೂರೈಕೆಗೆ ಮುಂದೆ ಬಂದ ಮಿತ್ರ ರಾಷ್ಟ್ರಗಳು..!
ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗೆ ಸೋಂಕು