ಕೊರೊನಾ ಸಂಕಷ್ಟದಲ್ಲಿ ಭಾರತ – ಆಕ್ಸಿಜನ್ ಪೂರೈಕೆಗೆ ಮುಂದೆ ಬಂದ ಮಿತ್ರ ರಾಷ್ಟ್ರಗಳು..!

1 min read

ಕೊರೊನಾ ಸಂಕಷ್ಟದಲ್ಲಿ ಭಾರತ – ಆಕ್ಸಿಜನ್ ಪೂರೈಕೆಗೆ ಮುಂದೆ ಬಂದ ಮಿತ್ರ ರಾಷ್ಟ್ರಗಳು..!

ಇಡೀ ಭಾರತದಲ್ಲಿ ಕೊರೊನಾ ರೌದ್ರಾವತಾರಕ್ಕೆ ಜನರು ತತ್ತರಿಸಿಹೋಗಿದ್ದಾರೆ. ಎಲ್ಲಿ ನೋಡಿದ್ರು ಸಾವು ನೋವುಗಳೇ ಕಂಡುಬರುತ್ತಿವೆ. ಈ ನಡುವೆ ಆಸ್ಪತ್ರೆಗಳಲ್ಲಿ ಹಾಸಿಗೆ , ಆಕ್ಸಿಜನ್ ಕೊರೆತೆ ಎದುರಾಗಿದ್ದು, ಕೆಲ ಮಿತ್ರ ರಾಷ್ಟ್ರಗಳು ಭಾರತಕ್ಕೆ ಸಂಕಷ್ಟದ ಸಮಯದಲ್ಲಿ ಸಹಾಯಾಸ್ತ ಚಾಚಿವೆ.

ಹೌದು.. ಕೊರೋನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಕೆಗೆ ರಷ್ಯಾ, ಐರೋಪ್ಯ ಒಕ್ಕೂಟ, ಫ್ರಾನ್ಸ್ ನಿಂದ ಭಾರತಕ್ಕೆ ನೆರವು ಒದಗಿಬಂದಿದೆ. ರಷ್ಯಾ ಇನ್ನು 15 ದಿನಗಳಲ್ಲಿ ಆಮ್ಲಜನಕದ ಜೊತೆಗೆ ಕೊರೋನಾ ರೋಗಿಗಳಿಗೆ ಅಗತ್ಯವಾದ ರೆಮ್ ಡಿಸೀವರ್ ಇಂಜಕ್ಷನ್ ಔಷಧಿಯನ್ನೂ ನೀಡುವುದಾಗಿ ಹೇಳಿದೆ.

ಐರೋಪ್ಯ ರಾಷ್ಟ್ರಗಳು ಔಷಧದ ಜೊತೆಗೆ ಆಕ್ಸಿಜನ್ ಕಂಟೈನರ್ ಗಳನ್ನು ನೀಡಲು ಮುಂದೆ ಬಂದಿದೆ. ಫ್ರಾನ್ಸ್ ಯಾವುದೇ ನೆರವು ಬೇಕಾದರೂ ಕೊಡಲು ಸಿದ್ಧ ಎಂದು ಭರವಸೆ ನೀಡಿದೆ. ಇನ್ನು ಭಾರತೀಯ ಸೇನೆಯ ವೈದ್ಯಕೀಯ ಸೇವಾಸಂಸ್ಥೆ ವಿಮಾನಗಳು ಜರ್ಮನಿಯಿಂದ 23 ಸಂಚಾರಿ ಆಮ್ಲಜನಕ ಘಟಕಗಳನ್ನು ಭಾರತಕ್ಕೆ ತರಲಿವೆ.

ಉಚಿತ ಕೊರೊನಾ ಲಸಿಕೆ ಯಾಕೆ ಕೊಡೋಕೆ ಆಗಲ್ಲ..?

ಭಾರತದಲ್ಲಿ ವಿಶ್ವದ ಅತಿ ದೊಡ್ಡ ಪರಮಾಣು ಘಟಕ ನಿರ್ಮಾಣ..!

ಉತ್ತರಾಖಂಡ್ ನಲ್ಲಿ ಮತ್ತೊಮ್ಮೆ ಹಿಮಸ್ಫೋಟ : 8ಕ್ಕಿಂತ ಅಧಿಕ ಮಂದಿ ಸಾವು – 438 ಜನರ ರಕ್ಷಣೆ

ವೈದ್ಯಲೋಕವನ್ನ ದಾರಿ ತಪ್ಪಿಸುತ್ತಿದೆ ಕೊರೊನಾ ಎರಡನೇ ಅಲೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd