Crime : ಜೊತೆಗಿರಲು ಒಪ್ಪದ ಪತ್ನಿಗೆ HIV ರೋಗಿಯ ರಕ್ತ ಇಂಜೆಕ್ಟ್ ಮಾಡಿದ ಪಾಗಲ್ ಪತಿ….
ಪತ್ನಿ ತನ್ನ ಜೊತೆಗೆ ಬಾಳಲು ಒಪ್ಪದೇ ಹೋಗಿದ್ದಕ್ಕೆ ಪಾಗಲ್ ಪತಿ HIV ಸೋಂಕಿತ ರೋಗಿಯ ರಕ್ತವನ್ನ ತನ್ನ ಪತ್ನಿಗೆ ಇಂಜೆಕ್ಟ್ ಮಾಡಿರುವ ಆಘಾತಕಾರಿ ಘಟನೆಯೊಂದು ಗುಜರಾತ್ ನ ಸೂರತ್ ನಲ್ಲಿ ನಡೆದಿದೆ…
ಈ ವ್ಯಕ್ತಿ ಈ ಅಪರಾಧವೆಸಗಲು ಖ್ಯಾತ ಟಿ.ವಿ ಕಾರ್ಯಕ್ರಮವೊಂದರಿಂದ ಪ್ರೇರಣೆ ಪಡೆದಿರುವುದು ಗೊತ್ತಾಗಿದೆ..
ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಸೂರತ್ ಪೊಲೀಸರು ಬಂಧಿಸಿದ್ದಾರೆ. ಬಳಿಕ ತನಿಖೆಯಲ್ಲಿ ಆತ ಕ್ರೈಂ ಥ್ರಿಲ್ಲಿಂಗ್ ಟಿವಿ ಶೋ ನಿಂದ ಪ್ರೇರಿತನಾಗಿದ್ದಾನೆ ಎಂಬುದು ತಿಳಿದುಬಂದಿದೆ.
ಸಂತ್ರಸ್ತ ಮಹಿಳೆ ಹಾಗೂ ಆರೋಪಿ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ 2 ತಿಂಗಳಿನಿಂದ ಇವರ ನಡುವೆ ನಿರಂತರ ಜಗಳವಾಗಿದೆ.. ಹೀಗಾಗಿ ಇಬ್ಬರೂ ಕೂಡ ಡಿವೋರ್ಸ್ ಪಡೆದಿದ್ದರು..
ಒಂಟಿ ಜೀವನದಿಂದ ಬೇಸತ್ತಿದ್ದ ಆರೋಪಿಯು ಮತ್ತೆ ಪತ್ನಿ ಜೊತೆಗೆ ಇರಲು ನಿರ್ಧರಿಸಿದ್ದ.. ಆದ್ರೆ ಇದಕ್ಕೆ ಪತ್ನಿ ಒಪ್ಪಿರಲಿಲ್ಲ.. ಆದ್ರೆ ಇದಕ್ಕೆ ಮಹಿಳೆ ಒಪ್ಪಿಕೊಳ್ಳಲಿಲ್ಲ.
ನಂತರ ಕೆಲ ದಿನಗಳು ಕಳೆದ ಮೇಲೆ ಇಬ್ಬರೂ ಡಿಸೆಂಬರ್ 25 ರಂದು ಭೇಟಿಯಾಗಿದ್ದರು..
ಇಬ್ಬರೂ ರೆಸ್ಟೋರೆಂಟ್ ಹೋಗಿ ಊಟ ಮಾಡಿ, ಶಾಪಿಂಗ್ ಮಾಡಿದ್ದರು. ಸಂಜೆ ಸ್ವಲ್ಪ ಖಾಸಗಿ ಸಮಯ ಕಳೆಯೋದಕ್ಕಾಗಿ ಮೋರಾ ಭಾಗಲ್ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳಕ್ಕೆ ತೆರಳಿದ್ದರು. ಈ ಸಮಯದಲ್ಲಿ ಆಕೆಯ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಆಕೆ ಒಪ್ಪದೇ ಹೋದಾಗ , ಆಕೆಯನ್ನ ಅಪ್ಪಿಕೊಳ್ಳುವ ನೆಪದಲ್ಲಿ ಹೆಚ್ಐವಿ ರೋಗಿಯ ರಕ್ತವನ್ನು ಇಂಜೆಕ್ಟ್ ಮಾಡಿದ್ದಾನೆ.
ಸ್ವಲ್ಪ ಸಮಯದಲ್ಲೇ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ಮರಳಿ ಪ್ರಜ್ಞೆ ಬಂದ ನಂತರ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಂಡು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾಳೆ..
ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ..
Crime husband injected hiv virus blood to wife