15 ದಿನದಲ್ಲೇ ಗಂಡನ ಬಿಟ್ಟು ಪ್ರಿಯಕರನ ಮದುವೆಯಾದಳು : ಆಕೆಯ ಮನೆಯವರು ಮಾಡಿದ್ದು ಘೋರ ಕೃತ್ಯ..!
ಬೆಂಗಳೂರು: ಮಹಿಳೆಯೊಬ್ಬಳು ಹೊಸದಾಗಿ ಮದುವೆಯಾದ ಕೇವಲ 15 ದಿನಕ್ಕೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಮತ್ತೊಮ್ಮೆ ಮದುವೆಯಾಗಿದ್ದಾಳೆ. ಆದ್ರೆ ಈ ರೀತಿ ಮಾಡಿದ್ದಕ್ಕೆ ಮಹಿಳೆಯ ಪರಿವಾರದವರು ಆಕೆಯ ಪ್ರಿಯತಮನನ್ನ ಕೊಲೆ ಮಾಡಿದ್ದಾರೆ.
ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ
ಬೆಂಗಳೂರಿನ ಲಗ್ಗೆರೆಯಲ್ಲಿ 27 ವರ್ಷದ ಚೇತನ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಚೇತನ್ ಪತ್ನಿಯ ಸಹೋದರ ಆಕಾಶ್ ಮತ್ತು ಚಿಕ್ಕಪ್ಪ ನಂಜೇಗೌಡ ಹಾಗೂ ಚಿಕ್ಕಪ್ಪನ ಮಗ ದಿಲೀಪ್ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಕ್ರಮ ಸಂಬಂಧ : ಪ್ರಿಯಕರನ ಜೊತೆ ಸೇರಿ ಪತಿಯ ಕಥೆ ಮುಗಿಸಿದ ರಾಕ್ಷಸಿ..!
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಭೂಮಿಕಾ ಮತ್ತು ಹನುಮಂತನಗರದ ಚೇತನ್ ಪ್ರೀತಿಸಿದ್ದರು. ಇವರ ಮದುವೆಗೆ ಹುಡುಗಿ ಮನೆಯಲ್ಲಿ ಒಪ್ಪಿಗೆ ನೀಡಿರಲಿಲ್ಲ. ಬಳಿಕ ಬೆಸ್ಕಾಂ ಉದ್ಯೋಗಿಯೊಂದಿಗೆ ಭೂಮಿಕಾ ಮದುವೆಯನ್ನ ಬಲವಂತವಾಗಿ ಮಾಡಲಾಗಿದೆ.
ಭಿಕ್ಷುಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಪಾಪಿಗಳು..!
ಆದ್ರೆ 15 ದಿನದಲ್ಲಿ ಆಕೆ ಗಂಡನ ಮನೆಯಿಂದ ಓಡಿ ಬಂದು ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಳು. ಇದಾದ ಬಳಿಕ ಭೂಮಿಕಾ -ಚೇತನ್ ಮನೆಗೆ ನುಗ್ಗಿರುವ ಆರೋಪಿಗಳು ಭೂಮಿಕಾಳನ್ನು ಹೊರಗೆ ದಬ್ಬಿ ಚೇತನ್ ನನ್ನು ಹತ್ಯೆಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.








