ಡಿವೋರ್ಸ್‌ ಪಡೆಯಲು ಮುಗಿಬಿದ್ದ ಚೀನಾದ ಲಕ್ಷಾಂತರ ಜೋಡಿಗಳು : ಕಾರಣ..!

1 min read

ಡಿವೋರ್ಸ್‌ ಪಡೆಯಲು ಮುಗಿಬಿದ್ದ ಚೀನಾದ ಲಕ್ಷಾಂತರ ಜೋಡಿಗಳು : ಕಾರಣ..!

ಚೀನಾ ಹೇಳಿ ಕೇಳಿ ಈ ದೇಶದಲ್ಲಿ ಎಲ್ಲವೂ ವಿಚಿತ್ರ, ಈ ದೇಶದ ಸಂಸ್ಕೃತಿ ಪದ್ದತಿಯೂ ವಿಚಿತ್ರ, ಜನರೂ ವಿಚಿತ್ರ. ಈ ದೇಶವೇ ವಿಚಿತ್ರ. ನಾವು ಅಷ್ಟಕ್ಕೂ ಚೈನಾ ಬಗ್ಗೆ ಈಗ ಯಾಕ್ ಮಾತನಾಡ್ತಿದ್ದೀವಿ ಅಂದ್ಕೊಂಡ್ರಾ ಅದಕ್ಕೆ ಕಾರಣ ಚೈನಾದಲ್ಲಿ ಲಕ್ಷಾಂತರ ಜನರು ಲಾಯರ್ ಗಳ ಕಚೇರಿಗೆ ಮುಗಿ ಬೀಳ್ತಿರೋದು. ಅವರೆಲ್ಲಾ ಹೀಗೆ ವಕೀಲರ ಕಚೇರಿಗಳಿಗೆ ಮುಗಿ ಬೀಳ್ತಿರೋದು ಯಾವುದೋ ಕೇಸ್ ಸಾಲ್ವ್ ಮಾಡೋಕಾಗ್ಲೀ ಆಸ್ತಿ ವಾಜಜ್ಯ ಬಗೆಹರಿಸಿಕೊಳ್ಳೋದಕ್ಕಾಗ್ಲೀ ಇಂತಹ ಕಾರಣಗಳಿಗೇನೂ ಅಲ್ಲ.

OMG… ಟೇಕ್ ಆಫ್ ಗೆ ಸಿದ್ಧವಾಗ್ತಿದೆ ಫ್ಲೈಯಿಂಗ್ ಕಾರ್…!

ಬದಲಾಗಿ ಈ ಚೀನೀಯರು ಹೀಗೆ ನಾ ಮುಂದು ತಾ ಮುಂದು ಅಂತ ದೌಡಾಯಿಸುತ್ತಿರೋದು ಡಿವೋರ್ಸ್ / ವಿಚ್ಛೇಧನ ಪಡೆಯೋಕೆ. ಅಂದ್ರೆ ದಾಂಪತ್ಯದಿಂದ ದೂರಾಗೋದಕ್ಕೆ. ಅಷ್ಟಕ್ಕೂ ಡಿವೋರ್ಸ್ ಪಡೆಯೋದಕ್ಕೆ ಯಾಕಿಷ್ಟು ದುಂಬಾಲು ಬೀಳ್ತಿದ್ದಾರೆ ಅಂದ್ಕೊಂಡ್ರಾ ಅದಕ್ಕೂ ಕಾರಣ ಇದೆ.

ಬ್ಯಾಂಕ್ ಗ್ರಾಹಕರೇ ಗಮನಿಸಿ : ಸದ್ದಿಲ್ಲದೆ ಸೇವಾ ಶುಲ್ಕ ವಿಧಿಸುತ್ತಿವೆ ಬ್ಯಾಂಕ್ ಗಳು..!

ಚೀನಾದಲ್ಲಿ ಡಿವೋರ್ಸ್ ಪ್ರಮಾಣ ಪ್ರತೀ ವರ್ಷ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗ್ತಿದೆ. 2019ರಲ್ಲಿ ಇಡೀ ದೇಶದಲ್ಲಿ 90 ಲಕ್ಷ ಜನ ಮದುವೆ ಆಗಿದ್ದರೆ 45 ಲಕ್ಷ ಜನ ವಿಚ್ಚೇದನ ಪಡೆದಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.

ಭಾರತದಲ್ಲಿ ಇಂದಿನಿಂದ ‘BMW X3 xDrive30i SportX’ ಮಾರಾಟಕ್ಕೆ ಲಭ್ಯ…!

ಹೀಗಾಗಿ ಡಯವೋರ್ಸ್ ಪಡೆಯುವ ಪ್ರಕ್ರಿಯೆಯನ್ನ ಮತ್ತಷ್ಟು ಕಠಿಣ ಮಾಡಲು ಚೀನಾ ಸರ್ಕಾರ ಹೊರಟಿದೆ. ಇದಕ್ಕಾಗಿ ಈಗಗಲೇ ಕಾನೂನು ಕೂಡ ರೆಡಿ ಆಗಿದೆಯಂತೆ. ಇದೇ ಕಾರಣದಿಂದಾಗಿ ಗಾಬರಿಯಾಗಿರೋ ಡಿವೋರ್ಸ್ ಪ್ಲಾನ್ನಲ್ಲಿದ್ದ ಲಕ್ಷಾಂತರ ಜೋಡಿಗಳು ಈ ಕಾನೂನು ಪೂರ್ಣ ಪ್ರಮಾಣದಲ್ಲಿ ಜಾರಿಯಾಗೋ ಮೊದಲು ಡೈವೋರ್ಸ್ ಪಡೆಯಬೇಕೆಂದು ಡಿವೋರ್ಸ್ ಲೆಟರ್ ನೊಂದಿಗೆ ಲಾಯರ್ ಕಚೇರಿಗಳಿಗೆ ಓಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd