Crime : ಪೋಷಕರಿಲ್ಲದಾಗ 2 ವರ್ಷದ ಮಗುವನ್ನ ಅಮಾನುಷವಾಗಿ ಥಳಿಸುತ್ತಿದ್ದ ಆಯಾ ಅರೆಸ್ಟ್.,.!!
1 min read
ಮಗುವನ್ನ ನೋಡಿಕೊಳ್ತಿದ್ದ ಆಯಾ ಒಬ್ಬರು ಪೋಷಕರಿಲ್ಲದ ಸಮಯದಲ್ಲಿ ಮಗುವಿಗೆ ಚಿತ್ರ ಹಿಂಸೆ ನೀಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ..
ಪೋಷಕರು ಕೆಲಸಕ್ಕೆ ಹೋದ ಸಮಯದಲ್ಲಿ ಆಯಾ 2 ವರ್ಷದ ಮಗುವಿಗೆ ಚಿತ್ರಹಿಂಸೆ ನೀಡ್ತಿದ್ದ ದೃಶ್ಯ ಸೀಕ್ರೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ..
ರಜಿನಿ ಎಂಬಾಕೆ ಮಗುವನ್ನ ಅಮಾನುಷವಾಗಿ ಥಳಿಸಿ ಜುಟ್ಟು ಹಿಡಿದು ಎಳೆದಾಡಿರುವ ವಿಡಿಯೋ ನೋಡಿ ಪೋಷಕರು ಭಯಪಟ್ಟಿದ್ದಾರೆ..
ಈಕೆಗೆ ಮಗುವನ್ನು ನೋಡಿಕೊಳ್ಳಲು ಪೋಷಕರು ಆಹಾರದ ಜೊತೆಗೆ ಮಾಸಿಕ 5,000 ರೂ. ನೀಡುತ್ತಿದ್ದರು. ಪೋಷಕರಿಬ್ಬರು ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಈಕೆಗೆ ವಹಿಸಲಾಗಿತ್ತು.
ದಿನ ಕಳೆದಂತೆ ಮಗು ಮಂಕಾಗಿದ್ದನ್ನ ನೋಡಿದ್ದ ಪೋಷಕರು , ಇದರಿಂದಾಗಿ ಆತನನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಅಂಗಾಂಗಗಳು ಊದಿಕೊಂಡಿರುವುದು ಕಂಡು ಬಂದಿದೆ. ಇದರಿಂದಾಗಿ ಪೋಷಕರು ಆಯಾ ಮೇಲೆ ಅನುಮಾನದಿಂದ ಸಿಸಿಟಿವಿ ಅಳವಡಿಸಿದ್ದಾರೆ..
ಇದಾದ ಬಳಿಕ ಸಿಸಿಟಿವಿಯ ಆಯಾ ಕ್ರೌರ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.