Crime News : ಅಸಹಜ ಲೈಂಗಿಕ ಕ್ರಿಯೆಗೆ ನಕಾರ : ಬಾಲಕನನ್ನ ಇರಿದು ಕೊಂದ ಯುವಕ
ಛತ್ತೀಸ್ ಗಢ : ಬಾಲಕೊಬ್ಬ ಯುವಕನ ಜೊತೆಗೆ ಅಸಹಜ ಲೈಂಗಿಕ ಕ್ರಿಯೆಗೆ ವಿರೋಧಿಸಿದಕ್ಕೆ ಆತನನ್ನ 20 ವರ್ಷದ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಛತ್ತೀಸ್ ಗಢದ ಬೆಮೆತಾರಾದಲ್ಲಿ ನಡೆದಿದೆ.
ಆರೋಪಿಯನ್ನು ಪಂಕಜ್ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಬಿಜಭಟ ಮುರುಮ್ ಗಣಿ ಸಮೀಪದ ಪ್ರತ್ಯೇಕ ಸ್ಥಳಕ್ಕೆ ಸೋಮವಾರ ಬಾಲಕನನ್ನು ಕರೆದೊಯ್ದು ಮೊದಲಿಗೆ ಲೈಂಗಿಕ ಕ್ರಿಯೆಗೆ ಪ್ರಯತ್ನಿಸಿ ಒಪ್ಪದೇ ಹೋದಾಗ ಆತನನ್ನ ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಬೆಮೆತಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ಕಾಣೆಯಾಗಿರುವುದಾಗಿ ಬಾಲಕನ ಪೋಷಕರು ದೂರು ದಾಖಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
Crime News – boy killed by 20 year old for opposing unusual rape attempt