Crime News : ಮೈಸೂರು ರಾಜವಂಶಸ್ಥನೆಂದು ಸಾಫ್ಟ್‌ವೇರ್ ಕಂಪನಿ ಮಾಲೀಕನಿಗೆ ವಂಚನೆ – ನಾಲ್ವರ ಬಂಧನ…
ಮೈಸೂರು ರಾಜವಂಶಸ್ಥನೆಂದು ಹೈದ್ರಾಬಾದ್ ಮೂಲದ ಸಾಫ್ಟ್‌ವೇರ್ ಕಂಪನಿ ಮಾಲೀಕನಿಗೆ ವಂಚನೆ ನಡೆಸಿರುವ ಪ್ರಕರಣ ನಡೆದಿದೆ.
ನಾಗ ರಮಣೇಶ್ವರ ಎಂಬ ಸಾಫ್ಟ್ ವೇರ್ ಕಂಪನಿ ಮಾಲೀಕ ಕಂಪನಿ ಡೆವಲಪ್ ಮಾಡಲು ಲೋನ್ ಮೊರೆ ಹೋಗಿದ್ದದ್ದರು ಆಗ ಮೈಸೂರು ರಾಜವಂಶಸ್ಥರೆಂದು ಹೇಳಿಕೊಂಡು ಮನೋಜ್ ಅರಸು ಪರಿಚಯ ಮಾಡಿಕೊಂಡಿದ್ದಾರೆ. ಯಾವುದೇ ಅನುಮಾನ ಬರದಂತೆ ರಾಜನ ವೇಷಭೂಷಣ ದಲ್ಲೆ ಭೇಟಿ ಮಾಡಿದ್ದ ಮನೋಜ್ ಮೈ ತುಂಬ ಬಂಗಾರ, ರೇಷ್ಮೆ ಬಟ್ಟಿ ಕೈಯಲ್ಲಿ ರಾಜ ಹಿಡಿಯು ಕೋಲು ಹಿಡಿದು ಬಿಲ್ಡಪ್ ಕೊಟ್ಟಿದ್ದಾನೆ .
ಕೊನೆಗೆ ಲೋನ್ ಕೊಡಿಸುವ ಮೊದಲೆ ಲೋನ್ ಮೊತ್ತದ ಹತ್ತು ಫರ್ಸೆಂಟ್ ಕಮೀಷನ್ ನ್ನ ಆರೋಪಿಗಳು ಪಡೆದಿದ್ದಾರೆ. ಕೊನೆಗೆ ಲೋನ್ ಕೊಡಿಸದ ಹಿನ್ನೆಲೆ ಹಣ ವಾಪಸ್ ನೀಡುವಂತೆ ನಾಗ ರಮಣೇಶ್ವರ್ ಅವರು ಒತ್ತಡ ಹಾಕಿದ್ದಾರೆ. ಈ ವೇಳೆ ಹಣ ಕೊಡ್ತೇವೆಂದು ಬೆಂಗಳೂರಿಗೆ ರಮಣೇಶ್ವರ್ ರನ್ನ ಬರಲು ಹೇಳಿದ್ದ ಆರೋಪಿಗಳು ಬಳಿಕ ಬೂದಿಗೆರೆಗೆ ಬರಲು ಹೇಳಿದ್ದಾರೆ.
ಅದರಂತೆ ಕ್ಯಾಬ್ ಬುಕ್ ಮಾಡಿ ಹೊರಟಿದ್ದ ಸಾಫ್ಟ್ ವೇರ್ ಕಂಪನಿ ಮಾಲೀಕನನ್ನ ಮಾರ್ಗಮಧ್ಯೆ ಗೊಲ್ಲಹಳ್ಳಿ ಎಂಬಲ್ಲಿ ಕಾರು ತಡೆದ ಆರೋಪಿಗಳು ರಮಣೇಶ್ವರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಾಗಲೂರು ಪೊಲೀಸರು ದಲ್ಲಾಳಿ ಕುಮಾರ್, ರಾಜವಂಶಸ್ಥನೆಂದಹ ಹೇಳಿಕೊಂಡಿದ್ದ ಮನೋಜ್ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
Crime News : Fraud of software company owner as Mysore royalty – Four arrested…