ಬಾಲಕಿಯ ಮೇಲೆ ಅತ್ಯಾಚಾರ , 66 ರ ವೃದ್ಧನಿಗೆ 81 ವರ್ಷಗಳ ಜೈಲು ಶಿಕ್ಷೆ..!!

1 min read
RAPE COVCTION

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನ ಗರ್ಭೀಣಿಯಾಗಿಸಿದ  66 ವರ್ಷದ ವೃದ್ಧನಿಗೆ ಸುಮಾರು 81 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದಂತಹ ಘಟನೆ ಕೇರಳದಲ್ಲಿ ನಡೆದಿದೆ..

ಈತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದಾನೆ.. ಕೇರಳದ ತ್ವರಿತಗತಿ ನ್ಯಾಯಾಲಯವು ಆತನಿಗೆ 81 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ..  ಅಪರಾಧಿಗೆ 2.2 ಲಕ್ಷ ದಂಡವನ್ನ ವಿಧಿಸಿದೆ..

2020ರ ಅಕ್ಟೋಬರ್‌ ನಲ್ಲಿ ಬಾಲಕಿ ಆಸ್ಪತ್ರೆಗೆ ದಾಖಲಾದಾಗ, ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಆಗ ಬಾಲಕಿಗೆ 15 ವರ್ಷ ವಾಗಿತ್ತು. ಸಂತ್ರಸ್ತೆಯ ಹೇಳಿಕೆ ಮತ್ತು ಗರ್ಭಪಾತದ ಬಳಿಕ ಭ್ರೂಣದಿಂದ ಸಂಗ್ರಹಿಸಿದ ಡಿಎನ್‌ಎ ಪುರಾವೆಗಳ ಆಧಾರದ ಮೇಲೆ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd