4 ವರ್ಷದ ಬಾಲಕಿ ಮೇಲೆ ಅತ್ಯಾಚಾರ : 65 ವರ್ಷದ ಕಾಮುಕನ ಬಂಧನ..!
65 ವರ್ಷದ ವೃದ್ಧನೋರ್ವ 4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಚಾಕೊಲೇಟ್ ನೀಡುವುದಾಗಿ ಆಕೆಯನ್ನ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ಧಾನೆ ಎನ್ನಲಾಗಿದೆ.
ಮಗು ಹೊಟ್ಟೆ ನೋವು ಖಾಸಗಿ ಭಾಗಗಳಲ್ಲಿ ನೋವಾಗುತ್ತಿದೆ ಎಂದು ಹೇಳಿಕೊಂಡಾಗ ಆಕೆಯ ಪೋಷಕರು ವಿಚಾರಿಸಿದ್ದಾರೆ. ಮಗು ನಡೆದಿದ್ದನ್ನ ಹೇಳಿಕೊಂಡಿದೆ. ಬಳಿಕ ಪೋಷಕರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದಾರೆ.
ಇನ್ನೂ ಈತ ಈ ಹಿಂದೆಯೂ ಅಪ್ರಾಪ್ತೆ ಮೇಲೆ ಲೈಂಗಿಕಲ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ಆದ್ರೆ ಸಂತ್ರಸ್ತೆ ಕುಟುಂಬಸ್ಥರು ಸಮಾಜಕ್ಕೆ ಹೆದರಿ ಈತನ ವಿರುದ್ಧ ಪ್ರಕರಣ ದಾಖಲು ಮಾಡಿರಲಿಲ್ಲ ಎಂದು ಸ್ಥಲೀಯರು ಆರೋಪ ಮಾಡಿರೋದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಗುವನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರೋದು ಗೊತ್ತಾಗಿದೆ. ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಸಾಮೂಹಿಕ ಅತ್ಯಾಚಾರದ ಆರೋಪಿಯಾಗಿದ್ದ ಅಪ್ರಾಪ್ತನಿಗೆ ಜೀವಾವಧಿ ಶಿಕ್ಷೆ..!








