ಮದುವೆಗೂ ಮುಂಚೆ ಮಗಳ ಕೃತ್ಯದಿಂದಾಗಿ ಹೆಣವಾದ ತಂದೆ – ತಾಯಿ
ಮದುವೆಗೆ 3 ದಿನಗಳ ಹಿಂದೆಯೇ ಮಗಳು ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದ ಕಾರಣದಿಮದ ಮನನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಗ್ರಾಮೀಣ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆ ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದರು. ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಅವರ ಮದುವೆಗೆ ಹುಡುಗಿಯ ತಂದೆ ತಾಯಿ ಒಪ್ಪದ ಕಾರಣ ಮಗಳಿಗೆ ಬೇರೆಯವರ ಜೊತೆಗೆ ಮದುವೆ ನಿಶ್ಚಯ ಮಾಡಲಾಗಿತ್ತು..
ಇನ್ನೇನು ಎಲ್ಲಾ ರತಯಾರಿಗಳು ನಡೆದು ಮದುವೆಗೆ ಕೇವಲ 3 ದಿನಗಳು ಇರುವಾಗಲೇ ಮಗಳು ಆತನ ಲವರ್ ಜೊತೆ ಎಸ್ಕೇಪ್ ಆಗಿದ್ದಳು. ಇದ್ರಿಂದ ಆಘಾತಕ್ಕೆ ಒಳಗಾಗಿದ್ದ ದಂಪತಿ ಮರ್ಯಾದೆಗೆ ಅಂಜಿ ಮಗಳ ಕೃತ್ಯಕ್ಕೆ ಮನನೊಮದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.








