ಕದ್ದೊಯ್ದಿದ್ದ ಲಸಿಕೆ ವಾಪಸ್ ತಂದಿಟ್ಟು ಕ್ಷಮೆಯಾಚಿಸಿದ ಕಳ್ಳರು..!
ಹರಿಯಾಣ : ಕಳ್ಳರ ಗ್ಯಾಂಗ್ ಒಂದು ಕದ್ದೊಯ್ದಿದ್ದ ಲಸಿಕೆಯನ್ನ ವಾಪಸ್ ತಮದು ಪೊಲೀಸ್ ಠಾಣೆ ಬಳಿ ಇಟ್ಟು ಹೋಗಿದ್ದೂ ಅಲ್ದೇ ಕ್ಷಮೆಯಾಚಿಸಿರುವ ವಿಚಿತ್ರ ಘಟನೆ ಹರಿಯಾಣದನಡೆದಿದೆ. ಕಳ್ಳರು ಕದ್ದ ಬಾಕ್ಸ್ ಜೊತೆಗೆ ಪತ್ರವನ್ನೂ ಬರೆದಿದ್ದು, ನಮ್ಮನ್ನು ಕ್ಷಮಿಸಿ.
ಬಾಕ್ಸ್ನಲ್ಲಿ ವ್ಯಾಕ್ಸಿನ್ ಇದೆ ಎಂದು ತಿಳಿಯದೇ ಕದ್ದಿದ್ದಕ್ಕೆ ಕ್ಷಮೆ ಇರಲಿ ಎಂದು ಬರೆದಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಗ ಆಗ್ತಿದ್ದು, ಕಳ್ಳರ ಮಾನವೀಯ ಗುಣಕ್ಕೆ ನೆಟ್ಟಿಗರು ಹಾಗೂ ಪೊಲೀಸರ ಮನ ಕರಗಿದೆ.
ಜಿಂದ್ ಜಿಲ್ಲೆಯ ಆಸ್ಪತ್ರೆಗೆ ನುಗ್ಗಿದ್ದ ಕಳ್ಳರು ಸ್ಟೋರ್ ರೂಂನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಆಸ್ಪತ್ರೆಯ ಹೆಡ್ ನರ್ಸ್ ಬಂದು ನೋಡುವಷ್ಟರಲ್ಲಿ ಔಷಧಿ ದಾಸ್ತಾನು ಕೊಠಡಿಯ ಬೀಗ ಮುರಿದಿತ್ತು. ಒಳಗೆ ಪರಿಶೀಲಿಸಿದಾಗ ವ್ಯಾಕ್ಸಿನ್ ಇದ್ದ ಬಾಕ್ಸ್ ಕಣ್ಮರೆಯಾಗಿತ್ತು. ವ್ಯಾಕ್ಸಿನ್ ಕಳವಿನಿಂದ ಜಿಲ್ಲೆಯಲ್ಲಿ ವಿತರಿಸಲು ಲಸಿಕೆ ಇಲ್ಲದಂತೆ ಆಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು.
2 ದಿನಗಳ ನಂತರ ಆಸ್ಪತ್ರೆಯಲ್ಲಿ ಕಳುವಾಗಿದ್ದ ಲಸಿಕೆಗಳಿದ್ದ ಬಾಕ್ಸ್ ಸ್ಥಳೀಯ ಪೊಲೀಸ್ ಠಾಣೆಯ ಬಳಿ ಪತ್ತೆಯಾಗಿತ್ತು. ಬಾಕ್ಸ್ನಲ್ಲಿ 182 ವೈಯಲ್ಸ್ ಕೋವಿಶೀಲ್ಡ್ ಹಾಗೂ 440 ಡೋಸೇಜ್ ಕೊವ್ಯಾಕ್ಸಿನ್ ಲಸಿಕೆ ಹಾಗೆಯೇ ಇದ್ದವು, ಬಾಕ್ಸ್ ಜೊತೆ ಕಳ್ಳರು ಬರೆದಿದ್ದ ಪತ್ರವೂ ಸಿಕ್ಕಿತ್ತು.
ಗೊತ್ತಿಲ್ಲದೇ ನಾವು ವ್ಯಾಕ್ಸಿನ್ ಇದ್ದ ಬಾಕ್ಸನ್ನು ಕದ್ದಿದ್ದೇವೆ. ಹೀಗಾಗಿ ಬಾಕ್ಸನ್ನು ಹಿಂತಿರುಗಿಸುತ್ತಿದ್ದೇವೆ. ಕ್ಷಮೆ ಇರಲಿ ಎಂದು ಹಿಂದಿಯಲ್ಲಿ ಬರೆಯಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೀಘ್ರವೇ ಕಳ್ಳರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.