13 ವರ್ಷದ ಬಾಲಕನನ್ನು ಬಲವಂತವಾಗಿ ಮದುವೆಯಾದ ಶಿಕ್ಷಕಿ..!
ಪಂಜಾಬ್ : ಮಾಂಗಲ್ಯ ದೋಷ ಹೊಂದಿದ್ದ ಟ್ಯೂಷನ್ ಟೀಚರ್ ಒಬ್ಬಳು ತನ್ನ ಬಳಿ ಪಾಠ ಕಲಿಯಲು ಬರುತ್ತಿದ್ದ, 13 ವರ್ಷದ ಬಾಲಕನನ್ನು ಬಲವಂತವಾಗಿ ಮದುವೆಯಾಗಿದ್ದೂ ಅಲ್ಲದೇ ಆತನ ಜೊತೆ ಸುಹಾಗ್ರಾತ್, ಹಳದಿ – ಮೆಹಂದಿ ಸೇರಿ ಬಹುತೇಕ ವಿಧಿವಿಧಾನಗಳನ್ನ ನೆರವೇರಿಸಿಕೊಂಡಿದ್ದಾಳೆ.
ಹೌದು ಇಂತಹ ಹೇಯ ಕೃತ್ಯ ಹರಿಯಾಣದ ಚಂಡೀಗಢದ ಪಂಜಾಬ್ ಜಲಂಧರ್ ನ ಬಸ್ತಿ ಬಾವಾ ಖೇಲ್ ಪ್ರದೇಶದಲ್ಲಿ ನಡೆದಿದೆ. ಮಹಿಳೆಯ ಜಾತಕದಲ್ಲಿ ಮಾಂಗಲ್ಯ ದೋಷವಿತ್ತು. ಈ ದೋಷವಿದ್ದರೆ ಮದುವೆಯಾದ ಬಳಿಕ ಗಂಡ ಸಾಯುತ್ತಾನೆಂಬ ಮೂಡ ನಂಬಿಕೆಯಿದೆ. ಹೀಗಾಗಿ ಆಕೆಯನ್ನ ಮದುವೆಯಾಗಲೂ ಯಾರೂ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಆಕೆಯ ಮನೆಮಂದಿಯಲ್ಲ ಸೇರಿ ಈ ರೀತಿ ಮಾಡಿದ್ದಾರೆ.

ಜೋತಿಷ್ಯರೊಬ್ಬರ ಮಾತಿನಂತೆಯೇ ದೋಷ ನಿವಾರಣೆಗೆ ಮೊದಲಿಗೆ ಅಪ್ರಾಪ್ತ ಹುಡುಗನೊಂದಿಗೆ ಸಾಂಕೇತಿಕವಾಗಿ ವಿವಾಹವಾಗಬೇಕಿತ್ತು. ಹೀಗಾಗಿಯೇ ಮನೆಯವರೆಲ್ಲಾ ಸೇರಿ ಪ್ಲಾನ್ ಮಾಡಿ ಟ್ಯೂಷನ್ ಟೀಚರ್ ಬಾಲಕನ ಪೋಷಕರಿಗೆ ನಿಮ್ಮ ಮಗ ಒಂದು ವಾರ ಟ್ಯೂಷನ್ಗಾಗಿ ನಮ್ಮ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದು ಅವರನ್ನ ಒಪ್ಪಿಸಿ ಉಳಿಸಿಕೊಂಡಿದ್ದಾಳೆ. ಬಳಿಕ ಬಾಲಕನೊಂದಿಗೆ ಬಲವಂತವಾಗಿ ವಿವಾಹವಾಗಿದ್ದಾಳೆ. ಬಾಲಕನಿಗೆ ಈ ಬಗ್ಗೆ ಯಾರ ಬಳಿಯೂ ಹೇಳದಂತೆಯೂ ತಿಳಿಸಿದ್ಧಾರೆ. ನಂತರ ಟೀಚರ್ ಕೈ ಬಳೆಗಳನ್ನು ಹೊಡೆದು ವಿಧವೆಯೆಂದು ಘೋಷಿಸಿ, ಸಂತಾಪ ಸಭೆಯನ್ನು ನಡೆಸಿದ್ದಾರೆ.
ಆದ್ರೆ ಬಾಲಕ ಮನೆಗೆ ಹಿಂದಿರುಗಿ ತನ್ನ ಪೋಷಕರಿಗೆ ಎಲ್ಲಾ ವಿಚಾರವನ್ನೂ ತಿಳಿಸಿದ್ದಾನೆ. ಜೊತೆಗೆ ಒಂದು ವಾರ ನನ್ನನ್ನು ಅವರ ಮನೆ ಕೆಲಸ ಮಾಡುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾನೆ.
ಇದರಿಂದ ಬಾಲಕನ ಪೋಷಕರು ಸಿಟ್ಟಿಗೆದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಬಸ್ತಿ ಬಾವಾ ಖೇಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಎರಡು ಕಡೆಯವರು ರಾಜಿ ಸಂಧಾನ ಮಾಡಿಕೊಂಡು ದೂರು ಹಿಂಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್ ಅವರು ತಿಳಿಸಿದ್ದಾರೆ.
4 ವರ್ಷದ ಬಾಲಕಿ ಮೇಲೆ ಅತ್ಯಾಚಾರ : 65 ವರ್ಷದ ಕಾಮುಕನ ಬಂಧನ..!
ಸಾಮೂಹಿಕ ಅತ್ಯಾಚಾರದ ಆರೋಪಿಯಾಗಿದ್ದ ಅಪ್ರಾಪ್ತನಿಗೆ ಜೀವಾವಧಿ ಶಿಕ್ಷೆ..!








