ಅಮೆರಿಕಾದಲ್ಲಿ 70 ವರ್ಷಗಳ ಬಳಿಕ ಮಹಿಳಾ ಅಪರಾಧಿಗೆ ಮರಣದಂಡನೆ..!
ಅಮೆರಿಕ: ಅಮೆರಿಕಾದಲ್ಲಿ ಬರೋಬ್ಬರಿ 7 ದಶಕಗಳು ( 70 ವರ್ಷಗಳ) ನಂತರ ಅಪರಾಧಿಗೆ ಮರಣದಂಡನೆಯನ್ನ ವಿಧಿಸಲಾಗಿದೆ. ಮರದಂಡನೆ ಆದೇಶದಂತೆ ಕಾನ್ಸಾನ್ ನ ಲೀಸಾ ಮಾಂಟ್ ಗೊಮೇರಿ ಎಂಬ ಮಹಿಳಾ ಅಪರಾಧಿಗೆ ಮಾರಕ ಇಂಜೆಕ್ಷನ್ ನೀಡಲಾಗಿದ್ದು, ಮಹಿಳೆ ಮೃತಪಟ್ಟಿದ್ಧಾಳೆ.
4ನೇ ಮಹಡಿಯಿಂದ ಜಿಗಿದ ಯುವತಿಯ ಪ್ರಾಣ ಉಳಿಸಿದ ಆಟೋ..!
ಇಂಡಿಯಾನಾದ ಟೆರೆ ಹೋಟ್ನ ಜೈಲಿನಲ್ಲಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಯಿತು. ಬಾಬಿ ಜೊ ಸ್ಟಿನ್ನೆಟ್ ಎಂಬ 23 ವರ್ಷದ ಗರ್ಭಿಣಿ ಮಹಿಳೆ ಮಿಸ್ಸೌರಿಯಲ್ಲಿ ವಾಸಿಸುತ್ತಿದ್ದರು. 2004ರಲ್ಲಿ ಈ ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದು, ಗರ್ಭದಲ್ಲಿದ್ದ ಹೆಣ್ಣು ಮಗುವನ್ನು ಚಾಕುವಿನಿಂದ ಕತ್ತರಿಸಿದ ಅಪರಾಧಕ್ಕಾಗಿ ಲೀಸಾಗೆ ಮರಣದಂಡನೆ ವಿಧಿಸಲಾಗಿತ್ತು.
ತವರಿಗೆ ಹೋಗಿ ಬರುತ್ತೀನಿ ಅಂತ ಹೋದ ವಧು, ಲವರ್ ಜೊತೆ ಎಸ್ಕೇಪ್… ಪಾಪ ಆಕೆಗಾಗಿ ಕಾಯ್ತಿದ್ದ ವರನ ಕಥೆ ಏನು..!
ಶಿಕ್ಷೆ ಜಾರಿಗೊಳಿಸಿದ ನಂತರ ಪ್ರತಿಕ್ರಿಯಿಸಿದ ಲೀಸಾ ಪರ ವಕೀಲೆ ಕೆಲ್ಲಿ ಹೆನ್ರಿ, ಮರಣದಂಡನೆಯನ್ನು ತಡೆಯುವಲ್ಲಿ ಆಡಳಿತ ವಿಫಲವಾಗಿರುವುದು ಇಂದು ಜಗಜ್ಜಾಹೀರಾಯಿತು. ಲೀಸಾಗೆ ಮರಣದಂಡನೆಯನ್ನು ಜಾರಿಗೊಳಿಸಿದ ಸಂದರ್ಭದಲ್ಲಿ ಹಾಜರಿದ್ದ ಪ್ರತಿಯೊಬ್ಬರು ಅವಮಾನದಿಂದ ತಲೆ ತಗ್ಗಿಸಬೇಕು ಎಂದರು. ಮರಣದಂಡನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜನರು ಜೈಲಿನ ಹೊರಗೆ ಪ್ರತಿಭಟನೆಯನ್ನೂ ನಡೆಸಿದರು.
ಕಿವುಡ, ಮೂಕ ಬಾಲಕಿಯ ಮೇಲೆ ಅತ್ಯಾಚಾರಗೈದು ಆಕೆಯ ಕಣ್ಣನ್ನೂ ಹಾನಿಗೊಳಿಸಿದ ಪಾಪಿಗಳು ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel