ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಕನ್ನಡದ ಹೊಸ ಚಿತ್ರ ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಕೇಸರಿ ಫಿಲಮ್ಸ್ ಕ್ಯಾಪ್ಟ್ಚರ್ ಬ್ಯಾನರ್ ನ ಅಡಿ ಮೂಡಿಬರುತ್ತಿರುವ ಈ ಹೊಸ ಚಿತ್ರಕ್ಕೆ ಶಿವಸೇನ ಛಾಯಾಗ್ರಹಣವಿದೆ.
ಚಿತ್ರದಲ್ಲಿ ತಬಲಾ ನಾಣಿ,ಸುಚೇಂದ್ರ ಪ್ರಸಾದ್ , ರಾಜೇಶ್ ನಟರಂಗ , ವಿಶ್ವ , ಅಪೂರ್ವ ಬಾರದ್ವಾಜ್ , ದೀಪ , ಅಭಿ ,ಅರುಣ ಬಾಲರಾಜ್ , ಯಶವಂತ್ ಶೆಟ್ಟಿ ಸೇರಿದಂತೆ ಅನೇಕ ನಟರ ತಾರಾಬಳಗವೇ ಇದೆ. ಖ್ಯಾತ ನಟರ ದಂಡೇ ಚಿತ್ರದಲ್ಲಿದ್ದು, ಚಿತ್ರದ ಪೋಸ್ಟರ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಕ್ರಿಟಿಕಲ್ ಕೀರ್ತನೆಗಳು.. ಟೈಟಲ್ ಸಿಕ್ಕಾಪಟ್ಟೆ ವಿಭಿನ್ನವಾಗಿದ್ದು, ಮೇಲ್ನೋಟಕ್ಕೆ ಹಾಸ್ಯಪ್ರಧಾನ ಚಿತ್ರವೆಂದೆನ್ನಿಸುತ್ತಿದೆ.
ಇದೊಂದು ಬೆಟ್ಟಿಂಗ್ ಆಧಾರಿತ ಚಿತ್ರವಾಗಿದ್ದು ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲೇ ಚಿತ್ರ ತೆರೆಗಪ್ಪಳಿಸಲಿದೆ.
ಚಿತ್ರಕ್ಕೆ ಶಿವಶಂಕರ್ ಅವರ ಸಂಗೀತವಿದ್ದು, ಆರವ್ ರಿಶಿಕ್ ಹಿನ್ನೆಲೆ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ.