ನಮ್ಮ ಸರಕಾರದ ಒಳ್ಳೆಯ ನಿರ್ಧಾರಗಳನ್ನು ಟೀಕಿಸುವ ಗುಂಪಿಗೆ, ಸರಿಯಾದ ಮಾರ್ಗದಲ್ಲಿ ನಡೆಯುವ ಜನರನ್ನು ಕಂಡರೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರ ಮೇಲೆ ಹರಿಹಾಯ್ದಿದ್ದಾರೆ.
ನಮ್ಮ ಸರಕಾರ ನೆರೆ ರಾಷ್ಟ್ರದ ಅಲ್ಪಸಂಖ್ಯಾತ ವಲಸಿಗರಿಗೆ ಪೌರತ್ವ ನೀಡುವ ಕಾನೂನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ ಈ ರೈಟ್ ಟಾಕಿಂಗ್ ಗ್ಯಾಂಗ್ ಜಗತ್ತಿನಾದ್ಯಂತ ವಲಸಿಗರ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. 370ನೇ ವಿಧಿ ರದ್ದು ಮಾಡಿದ್ದನ್ನು ವಿರೋಧಿಸುವ ಇವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ನಾವು ಏನೇ ನಿರ್ಧಾರ ಕೈಗೊಂಡರು ಅವರು ಅದನ್ನು ದೊಡ್ಡ ಅಡ್ಡಿಯೆಂದು ಭಾವಿಸಿ ವಿರೋಧಿಸುತ್ತಾರೆ. ಸರಿಯಾದುದನ್ನು ಮಾತನಾಡುವುದು ತಪ್ಪಲ್ಲ, ಆದರೆ ಇವರಿಗೆ ಸರಿಯಾದುದನ್ನು ಮಾಡುವವರನ್ನು ಕಂಡರಾಗದು ಎಂದು ಪ್ರಧಾನಿ ಕಿಡಿಕಾರಿದರು.
ಸಿದ್ದರಾಮಯ್ಯ ವಿರುದ್ಧವೇ ಡಿಕೆಶಿ ಸ್ಟಿಂಗ್ ಆಪರೇಷನ್ ದೆಹಲಿಯಲ್ಲಿ ನಡೆದ ಬ್ಲ್ಯಾಕ್ ಮೇಲ್ ಕಥೆ ಬಿಚ್ಚಿಟ್ಟ ಕುಮಾರಸ್ವಾಮಿ:ಸ್ಟಿಂಗ್ ಆಪರೇಷನ್ ಸ್ಪೆಷಲಿಸ್ಟ್ ಡಿ ಕೆ ಶಿವಕುಮಾರ್ ಹನಿಟ್ರಾಪ್ ಚರ್ಚೆ ಬಿಟ್ಟು ಅಭಿವೃದ್ಧಿ ಮಾಡಿ ಎಂದ ಹೆಚ್ ಡಿ ಕೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಸ್ಟಿಂಗ್ ಆಪರೇಷನ್ ಗಳ ಮಹಾ ಸ್ಫೋಟ ಸಂಭವಿಸಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧವೇ...








