ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ 5 ಸಾವಿರ ರನ್ ದಾಖಲಿಸಿದ ಸಾಧನೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ನಿನ್ನೆ ಲಖನೌ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (224 ಪಂದ್ಯಗಳಲ್ಲಿ 6706 ರನ್) ಅವರ ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಹಾಲಿ ನಾಯಕ ಶಿಖರ್ ಧವನ್ ಇದ್ದು, 199 ಪಂದ್ಯಗಳಲ್ಲಿ 6086 ರನ್‌ಗಳನ್ನು ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ 5 ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ನಾಯಕ ರೋಹಿತ್ ಶರ್ಮಾ, 221 ಪಂದ್ಯಗಳಲ್ಲಿ 5764 ರನ್ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಮಿಸ್ಟರ್ ಐಪಿಎಲ್ ಖ್ಯಾತಿಯ ಮಾಜಿ ಆಟಗಾರ ಸುರೇಶ್ ರೈನಾ, 205 ಪಂದ್ಯಗಳಲ್ಲಿ 5528 ರನ್ ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಎಂಎಸ್ ಧೋನಿ ಈ ಗಡಿ ದಾಟಿದ ಮೊದಲ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಎಂಎಸ್‌ಡಿ ಈಗಾಗಗಲೇ ಐಪಿಎಲ್‌ನಲ್ಲಿ ಅತಿ ಹೆಚ್ಚ ಡಿಸ್ಮಿಸಲ್‌ಗಳ (131 ಕ್ಯಾಚ್, 39 ಸ್ಟಂಪಿಂಗ್) ದಾಖಲೆ ಹೊಂದಿದ್ದಾರೆ. ದಿನೇಶ್ ಕಾರ್ತಿಕ್ (159 ಡಿಸ್ಮಿಸಲ್) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಬ್ಯಾಟಿಂಗ್ ಮತ್ತು ಕೀಪಿಂಗ್‌ನಲ್ಲಿ ಮಾತ್ರವೇ ಅಲ್ಲ ಕ್ಯಾಪ್ಟನ್ಸಿಯಲ್ಲೂ ಸೈ ಎನಿಸಿಕೊಂಡಿರುವ ಎಂ.ಎಸ್ ಧೋನಿ ಒಟ್ಟಾರೆ 13 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ಒಟ್ಟಾರೆ 4 ಬಾರಿ ಟ್ರೋಫಿ ಗೆದ್ದುಕೊಟ್ಟ ಸಾಧನೆಯನ್ನೂ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ.