ಹೊಸ ಗೆಟಪ್ ನಲ್ಲಿ ಚೆನ್ನೈಗೆ ಆಗಮಿಸಿದ ಮಹೇಂದ್ರ ಸಿಂಗ್ ಧೋನಿ..! ಸಿಎಸ್‍ಕೆ ಅಭಿಮಾನಿಗಳು ಫುಲ್ ಖುಷ್..!
ರಾಂಚಿ ರಾಂಬೋ… ಚೆನ್ನೈ ಸೂಪರ್ ಕಿಂಗ್ಸ್‍ನ ಸೂಪರ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಹೊಸ ಗೆಟಪ್ ನಲ್ಲಿ ಚೆನ್ನೈಗೆ ಆಗಮಿಸಿದ್ದಾರೆ.
ಕಳೆದ ಮಾರ್ಚ್ ನಿಂದ ರಾಂಚಿಯ ಫಾರ್ಮ್ ಹೌಸ್ ನಲ್ಲಿ ರೈತನಂತೆ ತನ್ನ ಜಮೀನಿನಲ್ಲಿ ಕೆಲಸ ಮಾಡಿದ್ದ ಧೋನಿ ಇದೀಗ 2020ರ ಐಪಿಎಲ್ ಟೂರ್ನಿಗೆ ರೆಡಿಯಾಗುತ್ತಿದ್ದಾರೆ.
ಬಿಳಿಗಡ್ಡ ಬಿಟ್ಟು ಪಕ್ಕ ರೈತನಂತಿದ್ದ ಧೋನಿಯ ಗೆಟಪ್ ಈಗ ಚೇಂಚ್ ಆಗಿದೆ. ತಲೆಕೂದಲು ಮತ್ತು ಗಡ್ಡವನ್ನು ಟ್ರಿಮ್ ಮಾಡಿಕೊಂಡಿರುವ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಶಿಬಿರವನ್ನು ಸೇರಿಕೊಂಡಿದ್ದಾರೆ.
ಆಗಸ್ಟ್ 15ರಿಂದ ಆಗಸ್ಟ್ 21ರವರೆಗೆ ಚೆನ್ನೈನಲ್ಲಿ ತರಬೇತಿ ಶಿಬಿರ ನಡೆಯಲಿದೆ. ಈ ನಡುವೆ ಕೋವಿಡ್ ಟೆಸ್ಟ್ ಗೂ ಆಟಗಾರರನ್ನು ಒಳಪಡಿಸಲಾಗುತ್ತದೆ. ಅಂತಿಮವಾಗಿ ಆಗಸ್ಟ್ 21ರಂದು ಸಿಎಸ್‍ಕೆ ತಂಡ ಯುಎಇಗೆ ಪ್ರಯಾಣ ಬೆಳೆಸಲಿದೆ.
ಇನ್ನೊಂದೆಡೆ, ಸುರೇಶ್ ರೈನಾ, ದೀಪಕ್ ಚಾಹರ್, ಪಿಯೂಷ್ ಚಾವ್ಲಾ, ಕರ್ನ್ ಶರ್ಮಾ, ಕೇದಾರ್ ಜಾಧವ್, ರುತುರಾಜ್, ಮೋನ್ ಸಿಂಗ್ ಮೊದಲಾದ ಆಟಗಾರರು ಚೆನ್ನೈಗೆ ಆಗಮಿಸಿದ್ದಾರೆ. ರವೀಂದ್ರ ಜಡೇಜಾ ಮಾತ್ರ ಈ ಶಿಬಿರದಲ್ಲಿ ಭಾಗಿಯಾಗುವುದಿಲ್ಲ. ಆಗಸ್ಟ್ 21ರಂದು ಅವರು ಚೆನ್ನೈಗೆ ಆಗಮಿಸಲಿದ್ದಾರೆ.
ಧೋನಿ ಚೆನ್ನೈಗೆ ಆಗಮಿಸುತ್ತಿದ್ದಂತೆ ಸಾಮಾಜಿಕ ಜಾಲ ತಾಣದಲ್ಲಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ವಿಶಿಲ್ ಶುರು… ತಲಾ ದರ್ಶನಮ್ ರಿಲೋಡೆಡ್ ಹೀಗೆ ಅನೇಕ ಕಮೆಂಟ್‍ಗಳು ಬಂದಿವೆ.
2019ರ ವಿಶ್ವಕಪ್ ನಂತರ ಮಹೇಂದ್ರ ಸಿಂಗ್ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಇದೀಗ ಐಪಿಎಲ್ ನಲ್ಲಿ ಆಡುವ ಮೂಲಕ ಅಭಿಮಾನಿಗಳಿಗೆ ತನ್ನ ನಾಯಕತ್ವ ಮತ್ತು ಬ್ಯಾಟಿಂಗ್ ಮೂಲಕ ರಸದೌತಣಗಳನ್ನು ಉಣಬಡಿಸಲಿದ್ದಾರೆ.








