CSK vs DC | ಚೆನ್ನೈ ತಂಡದ ಪ್ಲೇಯಿಂಗ್ 11 ಯಾರು ಇನ್..? ಯಾರು ಔಟ್..?
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ 55ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸವಾಲ್ ಹಾಕಿದೆ. ಮುಂಬೈನ ಡಾ.ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ಲೇ ಆಫ್ಸ್ ರೇಸ್ ನಲ್ಲಿ ಇರಬೇಕಾದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಇತ್ತ ಚೆನ್ನೈ ತಂಡಕ್ಕೆ ಈಗಾಗಲೇ ಪ್ಲೇ ಆಫ್ಸ್ ಹಾದಿ ಮುಚ್ಚಿದ್ದು, ನೇಮಕಾವಸ್ತೆಗೆ ಪಂದ್ಯವನ್ನಾಡುತ್ತಿದೆ. ಆದ್ರೆ ಚೆನ್ನೈ ತಂಡದ ನಾಯಕರಾಗಿರುವ ಧೋನಿ ಗೆಲುವಿನ ಹಿಂದೆ ಬೀಳೋದಂತೂ ನಿಜ.
ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ನೇ ಆವೃತ್ತಿಯಲ್ಲಿ ಈವರೆಗೂ 10 ಪಂದ್ಯಗಳನ್ನಾಡಿದೆ. ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಚೆನ್ನೈ 13 ರನ್ ಗಳಿಂದ ಸೋತಿದ್ದು, ಮೊಯಿನ್ ಅಲಿ 34 ರನ್, ಕಾನ್ವೆ 56 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಿಡಲ್ ಆರ್ಡರ್ ನಲ್ಲಿ ಅಸ್ಥಿರತೆ ದೊಡ್ಡ ತಲೆ ನೋವಾಗಿದೆ. ಜಡೇಜಾ ಕ್ಯಾಪ್ಟಿನ್ಸಿಯಲ್ಲಿ ಇದ್ದ ಆರಂಭಿಕರ ಸಮಸ್ಯೆ ಇದೀಗ ಧೋನಿ ನಾಯಕತ್ವದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಡ್ವೇನ್ ಕಾನ್ವೆ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ರುತುರಾಜ್ ಗಾಯಕ್ವಾಡ್ ಕೂಡ ಫಾರ್ಮ್ ಗೆ ಮರಳಿದ್ದಾರೆ. ಆದ್ರೆ ಉತ್ತಪ್ಪ ಆರಂಭದಲ್ಲಿ ತೋರಿದ ಪ್ರದರ್ಶನ ಮರೆತಂತೆ ಇದೆ. ಇನ್ನು ರಾಯುಡು, ಮೊಯಿನ್ ಅಲಿ ಮಿಡಲ್ ಆರ್ಡರ್ ನಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಧೋನಿ, ಪ್ರಿಟೋರಿಯಸ್ ಮಿಂಚು ಹರಿಸುತ್ತಿದ್ದಾರೆ. ಆದ್ರೆ ರವೀಂದ್ರ ಜಡೇಜಾ ಮೊದಲಿನ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಬೌಲಿಂಗ್ ವಿಚಾರಕ್ಕೆ ಬಂದರೇ ಮುಖೇಶ್ ಚೌಧರಿ, ಮಹೀಶ್ ತೀಕ್ಷಣ ಮ್ಯಾಚ್ ವಿನ್ನಿಂಗ್ ಬೌಲರ್ ಗಳಾಗಿ ಮಿಂಚುತ್ತಿದ್ದಾರೆ. ಮೊಯಿನ್ ಅಲಿ ಕೂಡ ಬೌಲಿಂಗ್ ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇವರಿಗೆ ಪ್ರಿಟೀರಿಯಸ್ ಮತ್ತು ಸಿಮರ್ಜೀತ್ ಸಾಥ್ ನೀಡಬೇಕಾಗಿದೆ.
ಇಂದಿನ ಪಂದ್ಯದಲ್ಲಿ ಉತ್ತಪ್ಪ ಬದಲಿಗೆ ಶಿವಂ ದುಬೆ ಆಡಲು ಸಾಧ್ಯತೆಗಳಿವೆ.
ಪ್ಲೇಯಿಂಗ್ ಇಲೆವೆನ್
ರುತುರಾಜ್ ಗಾಯಕ್ವಾಡ್
ಡೆವೊನ್ ಕಾನ್ವೇ
ರಾಬಿನ್ ಉತ್ತಪ್ಪ / ಶಿವಂ ದುಬೆ
ಅಂಬಟಿ ರಾಯುಡು
ಮೊಯಿನ್ ಅಲಿ
ಎಂಎಸ್ ಧೋನಿ
ರವೀಂದ್ರ ಜಡೇಜಾ
ಸಿಮರ್ಜೀತ್ ಸಿಂಗ್
ಡ್ವೈನ್ ಪ್ರಿಟೋರಿಯಸ್
ಮುಖೇಶ್ ಚೌಧರಿ
ಮಹೀಶ್ ತೀಕ್ಷಣ
CSK vs DC match Chennai Playing Team 11