ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

CSK vs GT Match | ಟೈಟಾನ್ಸ್ ಬೇಟೆಗೆ ಕಿಂಗ್ಸ್ ತಂಡ ಹೇಗಿರಲಿದೆ.?

Mahesh M Dhandu by Mahesh M Dhandu
May 15, 2022
in Newsbeat, Sports, ಕ್ರಿಕೆಟ್
ms-dhoni-confirms-he-will-play-ipl-2023 saaksha tv

ms-dhoni-confirms-he-will-play-ipl-2023 saaksha tv

Share on FacebookShare on TwitterShare on WhatsappShare on Telegram

CSK vs GT Match | ಟೈಟಾನ್ಸ್ ಬೇಟೆಗೆ ಕಿಂಗ್ಸ್ ತಂಡ ಹೇಗಿರಲಿದೆ.?

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಯಾವುದೂ ಕೂಡಿ ಬಂದಿಲ್ಲ.

Related posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

August 2, 2026
jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

August 2, 2026

ಸತತ ಗಾಯಗಳು, ಸೋಲುಗಳು, ನಾಯಕತ್ವ ಬದಲಾವಣೆ, ಹಿರಿಯ ಆಟಗಾರರ ಕಳಪೆ ಪ್ರದರ್ಶನ, ಅಂಪೈರಿಂಗ್ ತಪ್ಪುಗಳು.. ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ತಂಡಕ್ಕೆ ದುರದೃಷ್ಟವೇ ಎದುರಾಗಿದೆ.

ನಾಯಕತ್ವದ ಬಳಿಕ ಬಂದ ಗೆಲುವುಗಳು ಕೂಡ  ಪ್ಲೇ ಆಫ್ಸ್ ತಲುಪಿಸಲು ಸಾಧ್ಯವಾಗಿಲ್ಲ. ಮತ್ತೆರೆಡು ಪಂದ್ಯಗಳನ್ನಾಡಿದರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಯಾನ ಕೊನೆಯಾಗಲಿದೆ.

ಅದರಂತೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ 13 ನೇ ಪಂದ್ಯವನ್ನಾಡಲಿದೆ. ಈ ಬಾರಿ ಚೆನ್ನೈ ತಂಡ ಬಲಿಷ್ಠ ಗುಜರಾತ್  ಟೈಟಾನ್ಸ್ ತಂಡವನ್ನು ಎದುರಿಸಲಿದೆ.  

ಮುಂಬೈನ ವಾಂಖೇಡೆ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ. ಈ ಸೀಸನ್ ನಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

ಮೊದಲ ಸೆಣಸಾಟದಲ್ಲಿ ಗುಜರಾತ್ ಟೈಟಾನ್ಸ್ ತಂಡ ಮೂರು ವಿಕೆಟ್ ಗಳಿಂದ ಜಯ ಸಾಧಿಸಿತ್ತು.  ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದು ಸೇಡಿನ ಸಮರವಾಗಿದೆ.

ಎಂ.ಎಸ್.ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಆವೃತ್ತಿಯಲ್ಲಿ ಈವರೆಗೂ 12 ಪಂದ್ಯಗಳನ್ನಾಡಿದೆ.

ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ಗೆದ್ದು, ಎಂಟು ಅಂಕಗಳೊಂದಿಗೆ ಒಂಭತ್ತನೇ ಸ್ಥಾನದಲ್ಲಿದೆ.

csk-vs-gt-match-Chennai Super Kings Probable XI saaksha tv
csk-vs-gt-match-Chennai Super Kings Probable XI saaksha tv

 ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಿತ್ತು.  

ಇದರಲ್ಲಿ ಮುಂಬೈ ತಂಡ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಧೋನಿ 36 ರನ್ ಗಳಿಸಿದ್ರು. ಮುಖೇಶ್ ಚೌಧರಿ ಮೂರು ವಿಕೆಟ್ ಪಡೆದಿದ್ದರು.

ಕಳೆದ ಪಂದ್ಯದಲ್ಲಿನ ಸೋಲು ಚೆನ್ನೈ ತಂಡದ ಸಾಮರ್ಥ್ಯವನ್ನೇ ಪ್ರಶ್ನೆ ಮಾಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರಿಸೋದು ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ಆದ್ರೆ ಅದು ಸುಲಭವಲ್ಲ. ಯಾಕಂದರೇ ಚೆನ್ನೈ ತಂಡದಲ್ಲಿ ಸಮಸ್ಯೆಗಳೆ ಹೆಚ್ಚಾಗಿವೆ. ಬ್ಯಾಟಿಂಗ್ ನಲ್ಲಿ ಮಿಡಲ್ ಆರ್ಡರ್ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದೆ. ಆರಂಭಿಕ ಕಾನ್ವೇ ಒಬ್ಬರೇ ಸ್ಥಿರ ಪ್ರದರ್ಶನ ನೀಡಿದ್ದಾರೆ.

ಇನ್ನುಳಿದ ಬ್ಯಾಟರ್ ಗಳು ಮಿಂಚುತ್ತಿಲ್ಲ. ಅಂಬಾಟಿ ರಾಯುಡು, ದುಬೆ, ಮೊಯಿನ್ ಅಲಿ ಒಳ್ಳೆ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿಲ್ಲ. ಧೋನಿ ಅಬ್ಬರಿಸಿದ್ರೂ ಅವರಿಗೆ ಇತರೆ ಬ್ಯಾಟರ್ ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ.  

 ಮುಖ್ಯವಾಗಿ ರಾಬಿನ್ ಉತ್ತಪ್ಪ ಕಳೆದ ಕೆಲವು ಪಂದ್ಯಗಳಿಂದ ಸತತ ವೈಫಲ್ಯ ಅನುಭವಿಸುತ್ತಿದ್ದು, ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಗಳಿವೆ.

ಆದ್ರೆ ಬೌಲಿಂಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮವಾಗಿದೆ. ಮುಖೇಶ್ ಚೌಧರಿ ಆರಂಭದಲ್ಲಿಯೇ ವಿಕೆಟ್ ಬೇಟೆಯಾಡುತ್ತಿದ್ದಾರೆ.

ಮಿಡಲ್ ಓವರ್ ಗಳಲ್ಲಿ ಮಹೀಶ್ ತೀಕ್ಷಣ ರನ್ ಗಳಿಗೆ ಕಡಿವಾಣ ಹಾಕುತ್ತಾ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಇತರರಿಂದ ಉತ್ತಮ ಸಾಥ್ ಸಿಗಬೇಕಿದೆ.

csk-vs-gt-match-Chennai Super Kings Probable XI

Tags: #Saaksha TVCricketcskipl 2022
ShareTweetSendShare
Join us on:

Related Posts

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

ecchara-5-rashigalige-shani-kata-mooru-dina-astrology-kannada

Astro-ಎಚ್ಚರ.. ಎಚ್ಚರ.. ನಾಳೆಯಿಂದ ಮೂರು ದಿನ ಈ 5 ರಾಶಿಯವರಿಗೆ ಶನಿಕಾಟ..!

by admin
August 2, 2026
0

ನಾಳೆಯಿಂದ ಮೂರು ದಿನ ಕೆಲ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಈ ದಿನ ಶನಿ ಹಾಗೂ ಚಂದ್ರನ ಸಂಯೋಗದಿಂದಾಗಿ ಅತ್ಯಂತ ಅಶುಭ ಯೋಗ ಸೃಷ್ಟಿಯಾಗಲಿದೆ. ಇದು ಕೆಲ...

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

84 ರೂಪಾಯಿಗೆ ಪೆಟ್ರೋಲ್ ಸಿಗಲೇಬೇಕು- ಆಗಸ್ಟ್ 4ಕ್ಕೆ ಪ್ರಧಾನಿ ನಿವಾಸ ಮುತ್ತಿಗೆ ಹಾಕಲಿರುವ ಕೇಜ್ರಿವಾಲ್:ರಾಹುಲ್ ಗಾಂಧಿ ಹಾದಿಯಲ್ಲಿ ಕೇಜ್ರಿವಾಲ್!

by Shwetha
August 2, 2026
0

ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಭಾರಿ ಹೋರಾಟಕ್ಕೆ ಕರೆ ನೀಡಿದೆ. ಆಗಸ್ಟ್ 4 ರಂದು ದೆಹಲಿಯ ಮಾಜಿ...

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮಳೆಯ ಅಬ್ಬರದಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಳ

by Shwetha
August 2, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್‌,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram