CSK vs GT Match | ಗುಜರಾತ್ ವಿರುದ್ಧ 133 ರನ್ ಗಳಿಗೆ ಚೆನ್ನೈ ಸುಸ್ತು

1 min read
csk-vs-gt-match-chennai super kings saaksha tv

csk-vs-gt-match-chennai super kings saaksha tv

CSK vs GT Match | ಗುಜರಾತ್ ವಿರುದ್ಧ 133 ರನ್ ಗಳಿಗೆ ಚೆನ್ನೈ ಸುಸ್ತು

ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಆರಂಭ ಸಿಗಲಿಲ್ಲ.

ಡೆವೋನ್ ಕಾನ್ವೇ ಐದು ರನ್ ಗಳಿಸಿದರು. ಇದಾದ ಬಳಿಕ ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ ತಂಡಕ್ಕೆ ನೆರವಾದರು.

ಆದ್ರೆ  21 ರನ್ ಗಳಿಸಿದ್ದಾಗ ಮೋಯಿನ್ ಅಲಿ ಸಾಯಿ ಕಿಶೋಕ್ ಗೆ ವಿಕೆಟ್ ಒಪ್ಪಿಸಿದರು.

csk-vs-gt-match-chennai super kings  saaksha tv
csk-vs-gt-match-chennai super kings saaksha tv

ಈ ಹಂತದಲ್ಲಿ ರುತುರಾಜ್ ಗಾಯಕ್ವಾಡ್ ಅರ್ಧ ಶತಕ ಸಿಡಿಸಿದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಜಗದೀಶನ್ 39 ರನ್ ಗಳಿಸಿ ರನೌಟ್ ಆದರು.

ರುತುರಾಜ್ 53 ರನ್ ಗಳಿಸಿದ್ರು. ಧೋನಿ ಏಳು ರನ್ ಗಳಿಸಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಚೆನ್ನೈ ತಂಡ 133 ರನ್ ಗಳಿಸಿತು.

ಗುಜರಾತ್ ತಂಡದ ಪರ ಮೊಹ್ಮದ್ ಶಮಿ ಎರಡು ವಿಕೆಟ್ ಪಡೆದರು.

ರಶೀದ್ ಖಾನ್, ಅಲ್ಜರಿ ಜೋಸೆಫ್, ಸಾಯಿ ಕಿಶೋರ್ ತಲಾ ಒಂದು ವಿಕೆಟ್ ಪಡೆದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd