csk vs gt match preview | ಜಡ್ಡು vs ಹಾರ್ದಿಕ್ : ಗೆಲುವು ಯಾರಿಗೆ..?
ಇಂಡಿಯನ್ ಪ್ರಿಮಿಯರ್ ಲೀಗ್ ನ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ತಂಡಲು ಮುಖಾಮುಖಿಯಾಗುತ್ತಿವೆ.
ಸಂಜೆ 7: 30ಕ್ಕೆ ಪುಣೆಯ ಎಮ್ ಸಿ ಎ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಇದು ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಗಳ ನಡುವಿನ ಗುದ್ದಾಟ.
ಹೌದು..! ಟೀಂ ಇಂಡಿಯಾದ ರಾಕ್ ಸ್ಟಾರ್ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಸವಾಲ್ ಹಾಕಿದ್ದಾರೆ.
ತಂಡಗಳ ಸ್ಟ್ರೆಂಥ್ ಮತ್ತು ವೀಕ್ನೆಸ್
ಚೆನ್ನೆ ಸೂಪರ್ ಕಿಂಗ್ಸ್
ಜಡೇಜಾ ನೇತೃತ್ವದ ಚೆನ್ನೈ ತಂಡ ಈ ಬಾರಿ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ಆರಂಭದ ನಾಲ್ಕು ಪಂದ್ಯಗಳನ್ನು ಸೋತಿರುವ ಚೆನ್ನೈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಂಬ್ಯಾಕ್ ಮಾಡಿದ್ದಾರೆ. ಇಂದು ಅದೇ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗುವ ತವಕದಲ್ಲಿದೆ. ಅಲ್ಲದೇ ಅಂಕಪಟ್ಟಿಯಲ್ಲಿ ಮೇಲೆರುವ ಪ್ಲಾನ್ ನಲ್ಲಿದೆ.
ಚೆನ್ನೈ ತಂಡಕ್ಕೆ ಆರಂಭಿಕ ರಾಬಿನ್ ಉತ್ತಪ್ಪ, ಶಿವಂ ದುಬೆ, ಮೊಯಿನ್ ಅಲಿ ಪ್ರಮುಖ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಇವರಿಗೆ ರಾಯುಡು, ಧೋನಿ, ಜಡೇಜಾ ಸಾಥ್ ನೀಡಬೇಕಿದೆ. ಮುಖ್ಯವಾಗಿ ರುತುರಾಜ್ ಗಾಯಕ್ವಾಡ್ ಫಾರ್ಮ್ ಗೆ ಬರಬೇಕಿದೆ.
ಇತ್ತ ಡ್ವೇನ್ ಬ್ರಾವೋ ಮೊದಲಿನ ಚಾರ್ಮ್ ನಲ್ಲಿ ಕಾಣಿಸಬೇಕಿದೆ. ಮೊಹೀಶ್ ತೀಕ್ಷಣ,
ಮುಕೇಶ್ ಚೌಧುರಿಗೆ ಕ್ರಿಸ್ ಜೋರ್ಡಾನ್ ಸಾಥ್ ನೀಡಬೇಕಿದೆ.
ಗುಜರಾತ್ ಟೈಟಾನ್ಸ್
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದು ಅಗ್ರ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವುದು ಗುಜರಾತ್ ಪ್ಲಾನ್ ಆಗಿದೆ.
ಶುಭ್ ಮನ್ ಗಿಲ್, ಹಾರ್ದಿಕ್ ಪಾಂಡ್, ಮಿಲ್ಲರ್, ರಾಹುಲ್ ಟೆವಾಟಿಯಾ ತಂಡದ ಪ್ರಮುಖ ಬ್ಯಾಟರ್ ಗಳಿದ್ದು, ಇವರಿಗೆ ವಿಜಯ್ ಶಂಕರ್, ವಾಡೆ, ಮನೋಹರ್ ಉತ್ತಮ ಸಾಥ್ ನೀಡಬೇಕಿದೆ. ಬೌಲಿಂಗ್ ನಲ್ಲಿ ಮೊಹ್ಮದ್ ಶಮಿ, ರಶೀದ್ ಖಾನ್ ಟ್ರಂಪ್ ಕಾರ್ಡ್ ಆಗಿದ್ದಾರೆ.
ಮುಖ್ಯವಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಆಲ್ ರೌಂಡರ್ ಆಟ ಪ್ಲಸ್ ಪಾಯಿಂಟ್ ಆಗಿದೆ. ಹಾರ್ದಿಕ್, ತೆವಾಟಿಯಾ ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಬದಲಿಸಬಲ್ಲರು.
ಮೇಲ್ನೋಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂತ ಗುಜರಾತ್ ಟೈಟಾನ್ಸ್ ತಂಡ ಬಲಿಷ್ಠವಾಗಿ ಕಾಣುತ್ತಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ.









