CSK vs MI Match | ಬೌಲರ್ ಗಳ ಆಟದಲ್ಲಿ ಚೆನ್ನೈ ವಿರುದ್ಧ ಗೆದ್ದ ಮುಂಬೈ
1 min read
CSK vs MI Match mumbai indians beat chennai saaksha tv
CSK vs MI Match | ಬೌಲರ್ ಗಳ ಆಟದಲ್ಲಿ ಚೆನ್ನೈ ವಿರುದ್ಧ ಗೆದ್ದ ಮುಂಬೈ
ಲೋ ಸ್ಕೋರಿಂಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಗೆಲುವು ದಾಖಲಿಸಿದೆ.
ಆ ಮೂಲಕ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಹಂತ ತಲುಪುವ ಆಸೆ ಕಮರಿ ಹೋಗಿದೆ.
ವಾಂಖೇಡೆ ಅಂಗಳದಲ್ಲಿ ಪಿಚ್ ಮರ್ಮ ಅರಿತ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು.
ಈ ಬಾರಿ ನಾಯಕನ ನಿರ್ಧಾರಗಳನ್ನು ಸಮರ್ಥಿಸಿಕೊಂಡ ವೇಗಿಗಳು ಆರಂಭದಿಂದಲೇ ಚೆನ್ನೈ ಬ್ಯಾಟರ್ ಗಳ ಬೇಟೆಯಾಡಿದರು.
ಪವರ್ ಪ್ಲೇ ನಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪವರ್ ಕಟ್ ಮಾಡಿದ ಮುಂಬೈ ಬೌಲರ್ ಗಳು, ಆರಂಭಿಕರೂ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳನ್ನು ಪೆವಿಲಿಯನ್ ಕಳುಹಿಸಿದರು.
ಭರವಸೆಯ ಆಟಗಾರ ಋತುರಾಜ್ ಗಾಯಕ್ವಾಡ್ (7) ಹಾಗೂ ಡೇವೊನ್ ಕಾನ್ವೆ (0), ಮಧ್ಯಮ ಕ್ರಮಾಂಕದಲ್ಲಿ ಮೋಯಿನ್ ಅಲಿ (0), ಕರ್ನಾಟಕದ ರಾಬಿನ್ ಉತ್ತಪ್ಪ (1) ಬಂದು ಹೋಗುವ ಸಂಪ್ರದಾಯ ಮುಗಿಸಿದರು.

ಮೊದಲ ಆರು ಓವರ್ ಗಳಲ್ಲಿ ಬೌಲರ್ ಗಳ ದರ್ಬಾರ್ ನಡೆಸಬೇಕಿದ್ದ ಚೆನ್ನೈ ಬ್ಯಾಟರ್ ನಿರಾಸೆ ಅನುಭವಿಸಿದರು. ಮೊದಲ ಆರು ಓವರ್ ಗಳಲ್ಲಿ ಸಿಎಸ್ ಕೆ ಐದು ವಿಕೆಟ್ ಕಳೆದುಕೊಂಡಿತು.
39 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಧೋನಿ ಹಾಗೂ ಆಲ್ ರೌಂಡರ್ ಡ್ವೇನ್ ಬ್ರಾವೊ ಜೋಡಿ 29 ಎಸೆತಗಳಲ್ಲಿ 39 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕ ಮಹೇಂದ್ರ ಸಿಂಗ್ ಧೋನಿ ಏಕಾಂಗಿ ಹೋರಾಟ ನಡೆಸಿದರು.
ಇವರು 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 36 ರನ್ ಬಾರಿಸಿದರು. ಚೆನ್ನೈ 16 ಓವರ್ಗಳಲ್ಲಿ 97 ರನ್ ಗಳಿಗೆ ಆಲೌಟ್ ಆಯಿತು.
ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ಗಳಿಸಿದ ಎರಡನೇ ಅತಿ ಕಡಿಮೆ ಸ್ಕೋರ್ ಇದಾಗಿದೆ. ಇದಕ್ಕೂ ಮುನ್ನ 2013ರಲ್ಲಿ ಮುಂಬೈ ವಿರುದ್ಧ ತಂಡ ಕೇವಲ 79 ರನ್ಗಳಿಗೆ ಆಲೌಟ್ ಆಗಿತ್ತು.
ಅಲ್ಪ ಮೊತ್ತ ಹಿಂಬಾಲಿಸಿದ ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಇಶಾನ್ ಕಿಶನ್, ಮೂರನೇ ಕ್ರಮಾಂಕದಲ್ಲಿ ಡೇನಿಯಲ್ ಸ್ಯಾಮ್ಸ್ ನಿರಾಸೆ ಅನುಭವಿಸಿದರು.
ರೋಹಿತ್ ಶರ್ಮಾ ಆಟ 18 ರನ್ ಗಳಿಗೆ ಅಂತ್ಯವಾಯ್ತು. ಐದನೇ ವಿಕೆಟ್ ಗೆ ತಿಲಕ್ ವರ್ಮಾ ಹಾಗೂ ಹೃತಿಕ್ ಶೋಕಿನ್ (18) ಜೋಡಿ 47 ಎಸೆತಗಳಲ್ಲಿ 48 ರನ್ ಸೇರಿಸಿದರು.
ಗೆಲುವಿಗೆ ಅಗತ್ಯ ರನ್ ಗಳನ್ನು ಟೀಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಗೆಲುವಿನ ಕಲೆ ಹಾಕಿದರು. ತಿಲಕ್ ಅಜೇಯ 34 ರನ್ ಬಾರಿಸಿದರೆ, ಟೀಮ್ ಡೇವಿಡ್ ಅಜೇಯ 16 ರನ್ ಸಿಡಿಸಿದರು. CSK vs MI Match mumbai indians beat chennai