CSK vs PBKS Match | ಚೆನ್ನೈ ತಂಡದ Probable XIs
ಟಾಟಾ ಐಪಿಎಲ್ 2022ರ 38ನೇ ಪಂದ್ಯ ಸೇಡಿನ ಸಮರವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲ್ ಹಾಕಿದ್ದು, ಮುಂಬೈನಲ್ಲಿ ಈ ಪಂದ್ಯ ನಡೆಯಲಿದೆ. 15 ನೇ ಸೀಸನ್ ನಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಮೊದಲ ಬಾರಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಟ ನಡೆಸಿದ್ದಾಗ ಪಂಜಾಬ್ ಕಿಂಗ್ಸ್ ತಂಡ 54 ರನ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.
ಈ ಸೀಸನ್ ನಲ್ಲಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಜಡ್ಡು ಟೀಂ ಈ ಸೀಸನ್ ನಲ್ಲಿ ಈವರೆಗೂ ಏಳು ಪಂದ್ಯಗಳನ್ನಾಡಿದ್ದು, ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಐದು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ.
ಈ ಟ್ರೆಂಡ್ ನೋಡಿದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಪ್ಲೇ ಆಫ್ಸ್ ಗೆ ಎಂಟ್ರಿ ಕೊಡೋದು ನೂರಕ್ಕೆ ನೂರಷ್ಟು ಅನುಮಾನ ಆಗಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ ಚೆನ್ನೈ ತಂಡ ಮೂರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ರಾಯುಡು 40, ಉತ್ತಪ್ಪ 30 ರನ್ ಗಳಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟ್ರೇಂಥ್ ಅಂಡ್ ವೀಕ್ನೆಸ್ ಬಗ್ಗೆ ಹೇಳೋದಾದ್ರೆ..
ಈ ಸೀಸನ್ ನಲ್ಲಿ ಚೆನ್ನೈ ತಂಡಕ್ಕೆ ಆರಂಭಿಕರ ಕೊರತೆ ಪ್ರತಿ ಪಂದ್ಯದಲ್ಲೂ ಕಾಣುತ್ತಿದೆ. ರುತುರಾಜ್ ಗಾಯಕ್ವಾಡ್ ಪದೇ ಪದೇ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಇದು ತಂಡದ ಹಿನ್ನೆಡೆಗೆ ಕಾರಣವಾಗಿದೆ. ಅಲ್ಲದೇ ರವೀಂದ್ರ ಜಡೇಜಾ ಕೂಡ ಟಚ್ ಕಳೆದುಕೊಂಡಿರುವುದು ತಂಡದ ಮೈನಸ್ ಪಾಯಿಂಟ್ ಆಗಿದೆ.
ಇನ್ನುಳಿಂದ ಆರಂಭಿಕ ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಶಿವಂ ದುಬೆ, ಧೋನಿ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಸ್ಯಾಂಟ್ನರ್ ಕೂಡ ಆಲ್ ರೌಂಡರ್ ಆಟ ಬರ್ತಿಲ್ಲ. ಆದ್ರೆ ಬೌಲಿಂಗ್ ನಲ್ಲಿ ಮುಖೇಶ್ ಚೌದರಿ, ಮಹೀಶ್ ತೀಕ್ಷಣ ಒಳ್ಳೆ ಫಾರ್ಮ್ ನಲ್ಲಿದ್ದಾರೆ. ಇವರಿಗೆ ಡ್ವೇನ್ ಪಿಟೋರಿಯನ್ಸ್ , ಬ್ರಾವೋ ಸಾಥ್ ನೀಡಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ನ ಸಂಭಾವ್ಯ ತಂಡ
ರುತುರಾಜ್ ಗಾಯಕ್ವಾಡ್
ರಾಬಿನ್ ಉತ್ತಪ್ಪ
ಅಂಬಟಿ ರಾಯುಡು
ಶಿವಂ ದುಬೆ
ರವೀಂದ್ರ ಜಡೇಜಾ ©
ಎಂಎಸ್ ಧೋನಿ (wk)
ಮಿಚೆಲ್ ಸ್ಯಾಂಟ್ನರ್
ಡ್ವೇನ್ ಬ್ರಾವೋ
ಮುಖೇಶ್ ಚೌಧರಿ
ಮಹೇಶ್ ತೀಕ್ಷಣ
ಡ್ವೈನ್ ಪ್ರಿಟೋರಿಯಸ್.
ಇಂದಿನ ವಾಂಖೆಡೆ ಪಿಚ್ ನಲ್ಲಿ ಪಂದ್ಯ ನಡೆಯುತ್ತಿದೆ. ಹೀಗಾಗಿ ಬೌಲಿಂಗ್ ಕಾಂಬಿನೇಷನ್ ಕೂಡ ಬ್ಯಾಟಿಂಗ್ನಷ್ಟೇ ಗಟ್ಟಿ ಇರಬೇಕು. csk-vs-pbks-match-chennai-team-probable-xis