CSK vs PBKS Match | ಪಂಜಾಬ್ ತಂಡದ Probable XIs
ಟಾಟಾ ಐಪಿಎಲ್ 2022ರ 38ನೇ ಪಂದ್ಯದಲ್ಲಿ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 15 ನೇ ಸೀಸನ್ ನಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿಗೆ ಸೆಣಸಾಡುತ್ತಿವೆ.
ಈ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಏಳು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಮಯಾಂಕ್ ಅಗರ್ ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ.
ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಮಯಾಂಕ್ ಅಗರ್ ವಾಲ್ 24 ರನ್, ಜಿತೇಶ್ ಶರ್ಮಾ 32 ರನ್ ಗಳಿಸಿದ್ದರು.
ಕಳೆದ ಬಾರಿ ಚೆನ್ನೈ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದಾಗ ಪಂಜಾಬ್ ತಂಡ 54 ರನ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಅದೇ ಆತ್ಮವಿಶ್ವಾಸದಲ್ಲಿ ಇಂದಿನ ಪಂದ್ಯದಲ್ಲಿಯೂ ಗೆಲುವು ಸಾಧಿಸಲು ಪಂಜಾಬ್ ತಂಡ ಪ್ಲಾನ್ ಮಾಡಿಕೊಂಡಿದೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ತಂಡ ಕಂಗೆಟ್ಟಿದ್ದು, ಮತ್ತೆ ಗೆಲುವಿನ ಟ್ರ್ಯಾಕ್ ಮರಳಲು ಕಸರತ್ತು ನೀಡಿದೆ.

ಪಂಜಾಬ್ ತಂಡದ ಸ್ಟ್ರೇಂಥ್ ಮತ್ತು ವೀಕ್ನೆಸ್ ಬಗ್ಗೆ ಮಾತನಾಡೋದಾದರೇ…
ಮಯಾಂಕ್ ನಾಯಕತ್ವದ ಪಂಜಾಬ್ ವಿಚಾರಕ್ಕೆ ಬಂದರೇ ಬ್ಯಾಟಿಂಗ್ ನಲ್ಲಿ ಸಮಸ್ಯೆಗಳು ಎದ್ದು ಕಾಣುತ್ತಿವೆ. ಮುಖ್ಯವಾಗಿ ನಾಯಕ ಮಯಾಂಕ್ ಅಗರ್ ವಾಲ್ ಬ್ಯಾಡ್ ಫಾರ್ಮ್ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ. ಜೊತೆಗೆ ಜಾನಿ ಬೈರ್ ಸ್ಟೋ ವೈಫಲ್ಯ, ಲಿಯಾಮ್, ಶಾರೂಕ್ ಖಾನ್ ಅಸ್ಥಿರ ಪ್ರದರ್ಶನ ತಂಡದ ಹಿನ್ನಡೆ ಕಾರಣವಾಗುತ್ತಿದೆ. ಕೇವಲ ಶಿಖರ್ ಧವನ್, ಜೀತೇಶ್ ಶರ್ಮಾ ಬ್ಯಾಟಿಂಗ್ ಮೇಲೆ ತಂಡದ ಗೆಲುವು ನಿಂತಿದೆ. ಬೌಲಿಂಗ್ ನಲ್ಲಿ ಕಗಿಸೋ ರಬಾಡ, ರಾಹುಲ್ ಚಹಾರ್, ಅರ್ಷದೀಪ್ ಸಿಂಗ್, ವೈಭವ್ ಅರೋರಾ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ.
ಇಂದಿನ ಪಂದ್ಯಕ್ಕಾಗಿ ಪಂಜಾಬ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಜಾನಿ ಬೈರ್ ಸ್ಟೋ ಬದಲು ಭನುಕಾ ರಾಜಪಕ್ಸೆಗೆ ಅವಕಾಶ ಸಿಗಬಹುದು.
ಪಂಜಾಬ್ ತಂಡದ ಸಂಭಾವ್ಯ ತಂಡ
ಮಯಾಂಕ್ ಅಗರ್ ವಾಲ್
ಶಿಖರ್ ಧವನ್
ಜಾನಿ ಬೈರ್ ಸ್ಟೋ ಅಥವಾ ಭನುಕಾ ರಾಜಪಕ್ಸೆ
ಲಿಯಾಮ್ ಲಿವಿಂಗ್‌ಸ್ಟೋನ್
ಜಿತೇಶ್ ಶರ್ಮಾ
ಶಾರುಖ್ ಖಾನ್
ಕಗಿಸೊ ರಬಾಡ
ನಾಥನ್ ಎಲ್ಲಿಸ್
ರಾಹುಲ್ ಚಹಾರ್
ಅರ್ಶ್‌ದೀಪ್ ಸಿಂಗ್
ವೈಭವ್ ಅರೋರಾ.
ಇಂದಿನ ವಾಂಖೆಡೆ ಪಿಚ್ ನಲ್ಲಿ ಪಂದ್ಯ ನಡೆಯುತ್ತಿದೆ. ಹೀಗಾಗಿ ಬೌಲಿಂಗ್ ಕಾಂಬಿನೇಷನ್ ಕೂಡ ಬ್ಯಾಟಿಂಗ್ನಷ್ಟೇ ಗಟ್ಟಿ ಇರಬೇಕು. csk-vs-pbks-match-Punjab-team-probable-xis