CSK vs PBKS | ಮತ್ತೆ ಸೋತ ಚೆನ್ನೈ.. ಪಂಜಾಬ್ ಗೆ ನಾಲ್ಕನೇ ಗೆಲುವು..
ಅಂಬಾಟಿ ರಾಯುಡು ಬಿರುಸಿನ ಬ್ಯಾಟಿಂಗ್ ನಡುವೆಯೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ತಂಡ 11 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಲಷ್ಟೆ ಶಕ್ತವಾಯ್ತು. ಆ ಮೂಲಕ 15 ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡ ಆರನೇ ಸೋಲು ಅನುಭವಿಸಿದೆ. ಇತ್ತ ನಾಲ್ಕನೇ ಗೆಲುವು ಸಾಧಿಸಿದ ಪಂಜಾಬ್ ತಂಡ, 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಆರನೇ ಸ್ಥಾನಕ್ಕೇರಿದೆ.
ಅಂದಹಾಗೆ 187 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರಾಬಿನ್ ಉತ್ತಪ್ಪ 1 ರನ್ ಗಳಿಸಿ ನಿರ್ಗಮಿಸಿದರು. ನಂತರ ಬಂದ ಮಿಚೆಲ್ ಸ್ಯಾಂಟ್ನರ್ 9 ರನ್, ಶಿವಂ ದುಬೆ 8 ರನ್ ಸಿಡಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರವೀಂದ್ರ ಜಡೇಜಾ 21* ರನ್, ಎಂಎಸ್ ಧೋನಿ 12 ರನ್ ಸಿಡಿಸಿದ್ರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಆದ್ರೆ ಚೆನ್ನೈ ತಂಡದ ಪರ ಅಂಬಾಟಿ ರಾಯುಡು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

39 ಎಸೆತಗಳನ್ನು ಎದುರಿಸಿದ ರಾಯುಡು 7 ಬೌಂಡರಿ, ಆರು ಸಿಕ್ಸರ್ ಗಳ ನೆರವಿನಿಂದ 78 ರನ್ ಗಳಿಸಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರಾಯುಡು, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಬಿರುಸಿನ ಬ್ಯಾಟಿಂಗ್ ಮೂಲಕ 78 ರನ್ಗಳ ಅದ್ಭುತ ರನ್ ಕಲೆಹಾಕಿದ್ದ ರಾಯುಡು ತಂಡವನ್ನ ಗೆಲುವಿನ ದಡಸೇರಿಸಲು ಎಡವಿದರು. ಅಂಬಟಿ ರಾಯುಡು ಅವರಿಗೆ ಉತ್ತಮ ಸಾಥ್ ನೀಡಿದ ಋತುರಾಜ್ ಗಾಯಕ್ವಾಡ್ 30 ರನ್‌ಗಳಿಸಿದರು. ಈ ಇವರಿಬ್ಬರು 2ನೇ ವಿಕೆಟ್‌ಗೆ 49 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು.
ಪಂಜಾಬ್ ಕಿಂಗ್ಸ್ ಪರ ಕಗೀಸೋ ರಬಾಡ, ರಿಷಿ ಧವಾನ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಮಯಂಕ್ ಅಗರ್ವಾಲ್ 18 ರನ್ ಸಿಡಿಸಿ ಬಹುಬೇಗನೆ ನಿರ್ಗಮಿಸಿದರು. ಆದರೆ ಶಿಖರ್ ಧವನ್ 59 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ನೆರವಿನಿಂದ 88 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಬನುಕಾ ರಾಜಪಕ್ಸ 32 ಎಸೆತಗಳಲ್ಲಿ ತಲಾ ಎರಡು ಬೌಂಡರಿ, ಸಿಕ್ಸರ್ ನೆರವನಿಂದ 42 ರನ್ ಗಳಿಸಿದರು. ಸಿಎಸ್‌ಕೆ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ 2ನೇ ವಿಕೆಟ್‌ಗೆ 110 ರನ್ಗಳ ಜೊತೆಯಾಟದ ಮೂಲಕ ತಂಡದ ಬೆನ್ನೆಲುಬಾಗಿ ಮಿಂಚಿದರು.
ನಂತರ ಬಂದ ಲಿವಿಂಗ್‌ಸ್ಟೋನ್ 19 ರನ್, ಜಾನಿ ಬೈರ್ಸ್ಟೋವ್ 6 ರನ್‌ಗಳಿಸಿದರು. csk-vs-pbks-Punjab Kings beat Chennai Super Kings by 11 runs