RCB ಕಪ್ ಗೆಲ್ಲೋವರೆಗೂ ಮದ್ವೆ ಆಗಲ್ವಂತೆ ಈ ಬೆಡಗಿ

1 min read
csk-vs-rcb-amit-mishra-tweet-gone-viral saaksha tv

RCB ಕಪ್ ಗೆಲ್ಲೋವರೆಗೂ ಮದ್ವೆ ಆಗಲ್ವಂತೆ ಈ ಬೆಡಗಿ

ಇಂಡಿಯನ್ ಪ್ರಿಮಿಯರ್ ಲೀಗ್ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 23 ರನ್ ಗಳಿಂದ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಪ್ಪ 88 ರನ್ , ದುಬೆ 95 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 216 ರನ್ ಕಲೆ ಹಾಕಿತು.

ಗೆಲ್ಲಲು 217 ರನ್ ಗಳ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮವಾಗಿ ಸಿಎಸ್ಕೆ 23 ರನ್ಗಳ ಜಯ ಸಾಧಿಸಿತು.

csk-vs-rcb-amit-mishra-tweet-gone-viral saaksha tv

ಇದರ ನಡುವೆ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಂಡುಬಂದ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣಗಳನ್ನು ಅಲ್ಲಾಡಿಸುತ್ತಿದೆ.

ಪಂದ್ಯದ ವೇಳೆ ಓರ್ವ ಯುವತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಪ್ರಶಸ್ತಿ ಗೆಲ್ಲುವವರೆಗೆ ಮದುವೆಯಾಗುವುದಿಲ್ಲ ಎಂಬ ಫಲಕದೊಂದಿಗೆ ಕಾಣಿಸಿಕೊಂಡಿದ್ದಾರೆ.

ಐಪಿಎಲ್ನಲ್ಲಿ ಪ್ರಮುಖ ವಿಕೆಟ್ ಪಡೆದವರಲ್ಲಿ ಒಬ್ಬರಾದ ಅಮಿತ್ ಮಿಶ್ರಾ ಅವರು ಈ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ ಆಕೆಯ ಪೋಷಕರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪರೋಕ್ಷವಾಗಿ ಆರ್ ಸಿಬಿ ಕಪ್ ಗೆಲ್ಲಲ್ಲ ಅಂತಾ ವ್ಯಂಗ್ಯವಾಡಿದ್ದಾರೆ. csk-vs-rcb-amit-mishra-tweet-gone-viral

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd