CSK vs RCB | ಚೆನ್ನೈ ವಿರುದ್ಧ ಹೋರಾಡಿ ಸೋತ ಬೆಂಗಳೂರು

1 min read
CSK vs RCB Highlights IPL 2022 Chennai beat Bangalore saaksha tv

CSK vs RCB | ಚೆನ್ನೈ ವಿರುದ್ಧ ಹೋರಾಡಿ ಸೋತ ಬೆಂಗಳೂರು

ಇಂಡಿಯನ್ ಪ್ರಿಮಿಯರ್ ಲೀಗ್ ನ 22 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 23 ರನ್ ಗಳಿಂದ ಸೋಲು ಅನುಭವಿಸಿದೆ.

ಆ ಮೂಲಕ 15 ನೇ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಗೆಲುವು ದಾಖಲಿಸಿದೆ.

ಡಿ.ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಳ್ತು. ಅದರಂತ ಮೊದಲು ಬ್ಯಾಟಿಂಗ್ ಮಾಡಲು ಬಂದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗದಿದ್ದರೂ ರಾಬಿನ್ ಉತ್ತಪ್ಪ, ಶಿವಂ ದುಬೆ ಅದ್ಭುತ ಆಟದ ಪ್ರದರ್ಶನ ನೀಡಿದರು.

ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ 17 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಮೋಯಿನ್ ಅಲಿ 3 ರನ್ ಗೆ ಸುಸ್ತಾದ್ರು. ಇದಾದ ಬಳಿಕ ರಾಬಿನ್ ಮತ್ತು ದುಬೆ ಜುಗಲ್ ಬಂಧಿ ಶುರುವಾಯ್ತು.

ಈ ಜೋಡಿ ಆರ್ ಸಿಬಿ ಬೌಲರ್ ಗಳಿಗೆ ಕಬ್ಬಣದ ಕಡಲೆಯಾದ್ರು. ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 4 ಬೌಂಡರಿ, 9 ಸಿಕ್ಸರ್ ನೆರವನಿಂದ 88 ರನ್ ಗಳಿಸಿದರು.

ಅತ್ಯದ್ಭುತ ಆಟದ ಪ್ರದರ್ಶನ ನೀಡಿದ ದುಬೆ 46 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್ ಗಳ ನೆರವಿನಿಂದ 95 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

CSK vs RCB Highlights IPL 2022 Chennai beat Bangalore saaksha tv

ಅಂತಿಮ ವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 216 ರನ್ ಗಳಿಸಿತು.

ಆರ್ ಸಿಬಿ ಪರ ಹಸರಂಗ ಎರಡು ವಿಕೆಟ್, ಹೆಜಲ್ ವುಡ್ ಒಂದು ವಿಕೆಟ್ ಪಡೆದರು. ಆಕಾಶ್ ದೀಪ್ 58 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.

ಈ ಬೃಹತ್ ಮೊತ್ತ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ್ ಫಾಫ್ ಡುಪ್ಲಸಿ 8 ರನ್ ಗಳಿಸಿ ಔಟ್ ಆದ್ರೆ ವಿರಾಟ್ ಕೊಹ್ಲಿ 1 ರನ್ ಗೆ ಡಗೌಟ್ ಸೇರಿಕೊಂಡರು.

ಇದರ ಬೆನ್ನಲ್ಲೆ ಅನೂಜ್ ರಾವತ್ 12 ರನ್ ಗಳಿಸಿ ತೀಕ್ಷಣಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಶಹಬ್ಬಾಸ್ ಕೊಂಚ ಸಮಯ ಚೆನ್ನೈ ಬೌಲರ್ ಗಳನ್ನ ಕಾಡಿದರು.

ಆದ್ರೆ  11 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದ ಮ್ಯಾಕ್ಸಿ 26 ರನ್ ಗಳಿಗೆ ಔಟ್ ಆದರು. ಇದಾದ ಬಳಿಕ  ಶಹಬ್ಬಾಸ್ ಮತ್ತು ಸುಯಾಶ್ ಪ್ರಭುದೇಸಾಯಿ ಆಟ ಶುರುವಾಯ್ತು.

ಈ ಜೋಡಿ ಚೆನ್ನೈ ಬೌಲರ್ ಗಳ ಬೆವರಿಳಿಸಿದರು. ಆದ್ರೆ 27 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 41 ರನ್ ಗಳಿಸಿದ್ದ ಶಹಬ್ಬಾಸ್ ಆಟಕ್ಕೆ ತೀಕ್ಷಣ ಬ್ರೇಕ್ ಹಾಕಿದರು.

ಇತ್ತ 18ಎಸೆತಳ್ಲಲಿ 34 ರನ್ ಗಳಿಸಿದ್ದ ಪ್ರಭುದೇಸಾಯಿ ಕೂಡ ತೀಕ್ಷಣಗೆ ವಿಕೆಟ್ ನೀಡಿದರು.

ಕೊನೆಯಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 34 ರನ್ ಗಳಿಸಿ ಬ್ರಾವೋಗೆ ವಿಕೆಟ್ ನೀಡಿದರು.

ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ರಾಯಲ್ಸ್ ಚಾಲೆಂಜರ್ಸ್ ತಂಡ 9 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೆ ಶಕ್ತವಾಯ್ತು.

ಚೆನ್ನೈ ಪರ ತೀಕ್ಷಣ 4 ವಿಕೆಟ್, ಜಡೇಜಾ 3 ವಿಕೆಟ್ ಪಡೆದು ಮಿಂಚಿದರು.  

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd