ADVERTISEMENT
Sunday, December 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲೆಫ್ಟ್ ನಲ್ಲಿ ನಿಂತು ಕಾಂಗ್ರೆಸ್ ಗೆ ಚಾಟಿ ಬೀಸಿದ ರೈಟ್ ಪರ್ಸನ್…

admin by admin
March 9, 2020
in Newsbeat, Politics, Samagra karnataka
ct_ravi
Share on FacebookShare on TwitterShare on WhatsappShare on Telegram

ಸಂವಿಧಾನದ ಬಗ್ಗೆ ಚರ್ಚೆ ನಡೆಸುವ ಮೂಲಕ ಕರ್ನಾಟಕ ವಿಧಾನಸಭೆ ಇಡಿ ದೇಶದ ಗಮನ ಸೆಳೆದಿದೆ. ಸೋಮವಾರ ನಡೆದ ಸಂವಿಧಾನ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡ ಸಚಿವ ಸಿ.ಟಿ.ರವಿ ಲೆಫ್ಟ್ ನಲ್ಲಿ ನಿಂತು ಕಾಂಗ್ರೆಸ್ ಗೆ ಚಾಟಿ ಬೀಸಿ ರೈಟ್ ಪರ್ಸನ್ ಎಂಬಂತೆ ಕಂಡು ಬಂದರು.

ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ ರವಿ ಸದನದಲ್ಲಿ ಕಾಂಗ್ರೆಸ್ಗೆ ಚಾಟಿ ಬೀಸಿದರು. ಅರ್ಧ ಗಂಟೆಗೂ ಹೆಚ್ಚು ಮಾತನಾಡಿದ ಅವರು, ಮುಸ್ಲಿಂ ಲೀಗ್ ಸ್ಥಾಪನೆ, 1965ರಲ್ಲಿ ಗಾಂಧಿ ಹತ್ಯೆ ಪ್ರಕರಣವನ್ನು ತನಿಖೆ ಮಾಡಿದ ಕಪೂರ್‌ ಆಯೋಗ, ತುರ್ತು ಪರಿಸ್ಥಿತಿ ಸಮಯದಲ್ಲಿ ಹೋರಾಟಗಾರ ಬಂಧನ, 253 ಪತ್ರಕರ್ತರ,ಮತ್ತು 52 ಜನ ವಿದೇಶಿ ಪತ್ರಕರ್ತರನ್ನು ಬಂಧಿಸಿದ್ದು, ಸೇರಿದಂತೆ ಅನೇಕ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿದರು. ತಮ್ಮ ಪ್ರಸ್ತಾಪದಲ್ಲಿ ಕಾಂಗ್ರೆಸ್ ಮಾಡಿರುವ ಲೋಪಗಳನ್ನು ಗುರುತಿಸಲು ಸಚಿವ ಸಿ.ಟಿ ರವಿ ಮುಂದಾದರು. ಇದೇ ವೇಳೆ ಅವರು ಅಂಬೇಡ್ಕರ್ ವಿಚಾರವನ್ನು ಪ್ರಸ್ತಾಪಿಸಿದಾಗ, ಕಾಂಗ್ರೆಸ್ ಪಕ್ಷದ ಶಾಸಕರು ಸಚಿವರ ಮೇಲೆ ಮುಗಿ ಬಿದ್ದರು.

Related posts

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

December 7, 2025
ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (07-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

December 7, 2025

ಅಂಬೇಡ್ಕರ್ ಅವರು ಬೌದ್ಧ ಧರ್ಮ ಯಾಕೆ ಸೇರಿದ್ರು ಎಂದು ಹೇಳಲು ಸಿ.ಟಿ ರವಿ ಮುಂದಾಗಿದ್ದರು. ಈ ವೇಳೆಯಲ್ಲಿ, ಅಂಬೇಡ್ಕರ್ ಅವರು “ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುವುದಿಲ್ಲ” ಎಂದು ಹೇಳಿದ ಮಾತನ್ನು ಸಿ.ಟಿ. ಪ್ರಸ್ತಾಪ ಮಾಡಿ , ಅಂಬೇಡ್ಕರ್ ಯಾಕೆ ಮಾತು ಹೇಳಿದರು ಎಂದು ವಿಶ್ಲೇಷಣೆ ಮಾಡಲು ಮುಂದಾದರು. ಆ ಕಾಲದಲ್ಲಿ ಜಾತಿ ವ್ಯವಸ್ಥೆ ತುಂಬ ಇತ್ತು. ಇದರಿಂದ ಬೇಸತ್ತು ಅಂಬೇಡ್ಕರ್ ಈ ಮಾತನ್ನು ಹೇಳಿದರು. ಅದಕ್ಕಾಗಿ ಅವರು ಬೌದ್ಧಧರ್ಮ ಸ್ವೀಕಾರ ಮಾಡಿದರು. ಇದೆ ಸಮಯದಲ್ಲಿ ಅಂಬೇಡ್ಕರ್ ಅವರಿಗೆ ಕ್ರಿಶ್ಚಿಯನ್ ಮಿಷನರಿಗಳು,ಮುಸ್ಲಿಂ ಮೌಲ್ವಿಗಳು ನಮ್ಮ ಧರ್ಮಕ್ಕೆ ಬನ್ನಿ ಎಂದು ಎಲ್ಲಾ ರೀತಿಯಾ ಆಸೆ, ಆಮಿಷಗಳನ್ನು ತೋರಿಸುತ್ತಾರೆ. ಆಗ ಅಂಬೇಡ್ಕರ್ ಹೇಳಿದ್ರು ” ನಾನು ಪ್ರತಿಭಟನಾ ಮಾರ್ಗವಾಗಿ ನಾನು ಹಿಂದೂ ಧರ್ಮವನ್ನು ತೊರಿಯುತ್ತಿದ್ದೇನೆ, ನನ್ನ ಸಂಸ್ಕೃತಿ ಅಲ್ಲ ” ಎಂದಿದ್ದರು. ಈ ವಿಚಾರ ಸಚಿವ ಸಿ.ಟಿ ರವಿ ಪ್ರಸ್ತಾಪ ಮಾಡಿದ ತಕ್ಷಣ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು.

ಸಚಿವ ಸಿ.ಟಿ ರವಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಜೆ ಜಾರ್ಜ್ ಅಂಬೇಡ್ಕರ್ ಅವರು ದೊಡ್ಡ ವ್ಯಕ್ತಿತ್ವ ಹೊಂದಿದ್ದರು. ಅಂತಹ ದೊಡ್ಡ ವ್ಯಕ್ತಿತ್ವ ಹೊಂದಿದ ಅಂಬೇಡ್ಕರ್ ಆಶೆ, ಆಮಿಷಗಳಿಗೆ ಒಳಗಾಗುತ್ತಾರಾ ? ಇದು ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅಪಮಾನ ಎಂದು ವಿರೋಧ ವ್ಯಕ್ತಪಡಿಸಿದರು. ಕೆ.ಜೆ ಜಾರ್ಜ್ ಅವರ ಮಾತಿಗೆ ಕಾಂಗ್ರೆಸ್ ಶಾಸಕರು ಧ್ವನಿಗೂಡಿಸಿದರು.

Tags: CT RaviVidhana Soudha
ShareTweetSendShare
Join us on:

Related Posts

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

by Shwetha
December 7, 2025
0

ತುಮಕೂರು: ರಾಜ್ಯ ರಾಜಕೀಯದಲ್ಲಿ ಸದಾ ತಮ್ಮ ನೇರ ಹಾಗೂ ನಿಷ್ಠುರ ಮಾತುಗಳಿಂದಲೇ ಸುದ್ದಿಯಲ್ಲಿರುವ ಹಿರಿಯ ನಾಯಕ ಹಾಗೂ ಸಚಿವ ಕೆ.ಎನ್. ರಾಜಣ್ಣ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ...

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (07-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 7, 2025
0

ಡಿಸೆಂಬರ್ 07, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದ ಒತ್ತಡವಿದ್ದರೂ ಕುಟುಂಬದ ಸಹಕಾರದಿಂದ ನೆಮ್ಮದಿ...

ಡಿಕೆಶಿ ಜೊತೆ ಸತೀಶ್ ಜಾರಕಿಹೊಳಿ ರಹಸ್ಯ ಮಾತುಕತೆ – ರಾಜಕೀಯಕ್ಕೆ ಹೊಸ ತಿರುವು

ಡಿಕೆಶಿ ಜೊತೆ ಸತೀಶ್ ಜಾರಕಿಹೊಳಿ ರಹಸ್ಯ ಮಾತುಕತೆ – ರಾಜಕೀಯಕ್ಕೆ ಹೊಸ ತಿರುವು

by Shwetha
December 6, 2025
0

ರಾಜ್ಯ ರಾಜಕಾರಣ ಮತ್ತೆ ಕಾವೇರಿದೆ. ಕಾಂಗ್ರೆಸ್ ಸರ್ಕಾರದ ಒಳಜಗಳದ ನಡುವೆಯೇ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಗುಪ್ತ ಭೇಟಿ ಹೊಸ ಚರ್ಚೆಗಳಿಗೆ...

ಜಾಮೀನು ಸಿಕ್ಕರೂ ಜೈಲಲ್ಲೇ ಉಳಿದ ‘ಬುರುಡೆ’ ಚಿನ್ನಯ್ಯ

ಜಾಮೀನು ಸಿಕ್ಕರೂ ಜೈಲಲ್ಲೇ ಉಳಿದ ‘ಬುರುಡೆ’ ಚಿನ್ನಯ್ಯ

by Shwetha
December 6, 2025
0

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಬೆಳ್ತಂಗಡಿ JMFC ನ್ಯಾಯಾಲಯ ಚಿನ್ನಯ್ಯನಿಗೆ ಜಾಮೀನು...

ರಷ್ಯಾ ನಮಗೆ ಹಿಂದಿನಿಂದಲೂ ಮಿತ್ರರಾಷ್ಟ್ರ: ಪ್ರಧಾನಿ ಮೋದಿ

ರಷ್ಯಾ ನಮಗೆ ಹಿಂದಿನಿಂದಲೂ ಮಿತ್ರರಾಷ್ಟ್ರ: ಪ್ರಧಾನಿ ಮೋದಿ

by Shwetha
December 6, 2025
0

ಭಾರತ–ರಷ್ಯಾ ನಡುವೆ ದಶಕಗಳಿಂದ ಬೆಳೆದಿರುವ ದಿಟ್ಟ ಮತ್ತು ಆಳವಾದ ಸ್ನೇಹವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ನಡೆದ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram