ಬಿರುಗಾಳಿ ಮಳೆಗೆ ಧರೆಗುರುಳಿದ ವಿಧ್ಯತ್ ಕಂಬಗಳು,, ರಸ್ತೆ ಮೇಲೆ ಉರುಳಿಬಿದ್ದ ತೆಂಗಿನ ಮರಗಳು, ವಿದ್ಯತ್ ಕಂಬಗಳು, ಹಾಗೂ ಪರಿವರ್ತಕಗಳು. ವರಣುನ ಆರ್ಭಟಕ್ಕೆ ನೆಲಸಮವಾದ ೧೨ ಎಕರೆ ಕಬ್ಬಿನ ಬೆಳೆ ..ಅಂದ್ಹಾಗೆ ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿ.. ಹೌದು ನಿನ್ನೆ ಸುರಿದ ಬಾರಿ ಮಳೆ ಹಾಗೂ ಗಾಳಿಗೆ ೮೦ ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಬಾದಾಮಿ ಹೊರವಲಯದ ರೈತರ ಹೊಲದಲ್ಲಿ ೮೦ ಕ್ಕು ಹೆಚ್ಚು ಕಂಬಗಳು ಧರೆಗುರುಳಿವೆ. ಅಲ್ಲದೆ ಬಾರಿ ಗಾಳಿಗೆ ಐದು ಮನೆಗಳ ಮೇಲ್ಚಾವಣೆ ತಗಡುಗಳು ಸಹ ಹೊಲದಲ್ಲಿ ಅಲ್ಲಲ್ಲಿ ಹಾರಿ ಬಿದ್ದಿವೆ. ಅಲ್ಲದೇ ಬೋರ್ ವೆಲ್ ಮಷಿನ್ ಗಳು,ಮನೆಗಳ ಗೋಡೆಗಳು ಮರಗಳು ಬಿದ್ದಿದ್ದು ಅಪಾರ ಪ್ರಮಾಣದ ಕಬ್ಬಿನ ಬೆಳೆ ಕೂಡ ನಾಶ ಆಗಿರುವಂತದ್ದು.ಇದರ ಜೊತೆಗೆ ಮಳೆಗೆ ನೆನೆದು ದಾನ್ಯಗಳು ಸಹ ಹಾಳಾದ ಘಟನೆ ನಡೆದಿದೆ. ರಾಮಪ್ಪ,ಗ್ಯಾನಪ್ಪ,ಹನುಮಂತ, ಮಾಗುಂಡಪ್ಪ, ಬಸವರಾಜ ಎಂಬುವರ ಹೊಲದಲ್ಲಿನ ಶೆಡ್ ಮನೆಗಳೇ ಮಳೆಗೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡಬೇಕೆಂದು ರೈತರ ಆಗ್ರಹ ಮಾಡ್ತಿದ್ದಾರೆ.
ಇನ್ನು ಬಾದಾಮಿ ತಾಲ್ಲೂಕಿನ ಕಬ್ಬಲಗೇರಿ ಗ್ರಾಮದಲ್ಲೂ ಮಳೆ ಗಾಳಿಗೆ ಸಾಕಷ್ಟು ನಷ್ಟ ಆಗಿದೆ.ಮಳೆ ಜೊತೆ ಬಾರಿ ಗಾಳಿ ಬೀಸಿದ ಪರಿಣಾಮ ಆ ಗ್ರಾಮದಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು, ಗಿಡ ಮರಗಳು ನೆಲಕ್ಕುರುಳಿವೆ. ಇದಲ್ಲದೇ ಕಬ್ಬಲಗೇರಿ ಗ್ರಾಮದ ರೈತ ಹನುಮಂತ ಮೂಲಿಮನಿ ಎಂಬುವರ 12 ಎಕರೆ ಕಬ್ಬು ನೆಲಸಮವಾಗಿದೆ.ತೆಂಗಿನ ಮರಗಳು ಬುಡಸಮೇತ ಉರುಳಿ ಬಿದ್ದಿದ್ದು, ಕಬ್ಬಲಗೇರಿ ಗ್ರಾಮದಲ್ಲೇ ಹತ್ತಾರು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿರುವ ಘಟನೆ ನಡೆದಿದೆ.
ರಾತ್ರಿಯಿಂದ ಮಾಹಿತಿ ಕೊಟ್ಟರೂ ಈ ವರೆಗೂ ಯಾವೊಬ್ಬ ಹೆಸ್ಕಾಂ ಅಧಿಕಾರಿಯೂ ಆ ಗ್ರಾಮಕ್ಕೆ ಭೇಟಿ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹೆಸ್ಕಾಂನವರು ತಿರುಗಿ ನೋಡ್ತಿಲ್ಲವಾದ್ದರಿಂದ ವಿದ್ಯತ್ ಸಂಪರ್ಕ ಕಡಿತ ಆಗಿದೆ. ಹಾಗಾಗಿ ಕುಡಿಯಲು ನೀರಿಲ್ಲ. ಆದಷ್ಟು ಬೇಗ ಅಧಿಕಾರಿಗಳು ವಿದ್ಯುತ್ ಕಂಬಗಳನ್ನ ಸರಿ ಮಾಡಿಸುವಂತೆ ರೈತರ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ, ಕೊರೊನ ಹಾವಳಿಯಿಂದ ಬೇಸತ್ತು ಸುಸ್ತಾಗಿರೋ ಸಾರ್ವಜನಿಕರು ಹಾಗೂ ರೈತರಿಗೆ ಮಳೆರಾಯನ ಆರ್ಭಟ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು ಮಾತ್ರ ಸುಳ್ಳಲ್ಲ..







