ಹಬ್ಬದ ದಿನದಂದು ಕರ್ಫ್ಯೂ… ರೈತರ ಆಕ್ರೋಶ

1 min read
farmers outrage against saaksha tv

ಹಬ್ಬದ ದಿನದಂದು ಕರ್ಫ್ಯೂ… ರೈತರ ಆಕ್ರೋಶ

ಕೋಲಾರ : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.

ಜೊತೆಗೆ ಗ್ರಾಮಗಳಲ್ಲಿ ಸಾಮೂಹಿಕವಾಗಿ ಎತ್ತುಗಳ ಕಿಚ್ಚು ಹಾಯಿಸುವುದಕ್ಕೂ ನಿರ್ಬಂಧಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ರೈತ ಮುಖಂಡ ರಮೇಶ್ ಕಿಡಿಕಾರಿದ್ದಾರೆ. 

ರೈತರು ವರ್ಷಕ್ಕೊಮ್ಮೆ ಆಚರಣೆ ಮಾಡುವ ಸಂಕ್ರಾಂತಿ ಹಬ್ಬಕ್ಕೆ ವೀಕೆಂಡ್ ಕರ್ಫ್ಯೂ ಅಡ್ಡಿಯಾಗಿದೆ.

Curfew on festive day farmers outrage against  saaksha tv

ವರ್ಷಪೂರ್ತಿ ರೈತನಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಶುಭ್ರಗೊಳಿಸಿ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುವ ಸಂಪ್ರದಾಯ, ಆದ್ರೆ ಗ್ರಾಮಗಳಲ್ಲಿ ಸಾಮೂಹಿಕವಾಗಿ ಎತ್ತುಗಳನ್ನು ಕಿಚ್ಚು ಹಾಯಿಸುವುದಕ್ಕೆ ನಿರ್ಬಂಧ ಏರಲಾಗಿದೆ.

ರಾಜಕೀಯ ಮುಖಂಡರಿಗೆ ಸಭೆ, ಸಮಾರಂಭ, ಮೆರವಣಿಗೆ ಮಾಡಬಹುದು. ಆದ್ರೆ ರೈತರು ತಮ್ಮ ಜಾನುವಾರುಗಳನ್ನು ಮೆರವಣಿಗೆ ಮಾಡಬಾರದು,ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

farmers outrage against saaksha tv

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd