cwg-2022-final | ಚೊಚ್ಚಲ ಪ್ರಯತ್ನದಲ್ಲಿ ಬೆಳ್ಳಿ ಗೆದ್ದ ಟೀಂ ಇಂಡಿಯಾ
ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ ಗೇಮ್ಸ್ ನ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಹಿಳೆಯರು ಬೆಳ್ಳಿ ಸಾಧನೆ ಮಾಡಿದ್ದಾರೆ.
ರೋಚಕ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ರನ್ ಗಳೊಂದಿಗೆ ಇಂಡಿಯಾವನ್ನು ಸೋಲಿಸಿ ಚೊಚ್ಚಲ ಪದಕವನ್ನು ಮುರಿಗೇರಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು.
ಆಸ್ಟ್ರೇಲಿಯಾದ ಪರ ಬೆಥ್ ಮೂನಿ 61 ರನ್, ಮೆಗ್ ಲ್ಯಾನಿಂಗ್ 36 ರನ್, ಗಾರ್ಡ್ ನರ್ 25 ರನ್ ಗಳಿಸಿದರು.

ಪಂದ್ಯ ಗೆಲ್ಲಲು 162 ರನ್ ಗಳ ಗುರಿಯನ್ನ ಪಡೆದ ಭಾರತ ಆರಂಭದಲ್ಲಿಯೇ ವಿಕೆಟ್ ಕಳೆದುಕೊಳ್ತು. 22 ರನ್ ಗಳಿಸುವಷ್ಟರಲ್ಲಿ ಸ್ಮೃತಿ ಮಂದನಾ ಮತ್ತು ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಳ್ತು.
ಈ ಹಂತದಲ್ಲಿ ಜೊತೆಯಾದ ಜೆಮಿಮಾ ಮತ್ತು ನಾಯಕ ಹರ್ಮನ್ ಪ್ರೀತ್ ಕೌರ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 96 ರನ್ ಗಳ ಜೊತೆಯಾಟವನ್ನಾಡಿದ್ರು.
ಈ ವೇಳೆ ಭಾರತದ ಪಾಳಯದಲ್ಲಿ ಗೆಲುವಿನ ನಗು ಮೂಡಿತ್ತು. ಆದ್ರೆ ಈ ಇಬ್ಬರೂ ಔಟ್ ಆದ ಬಳಿಕ ಟೀಂ ಇಂಡಿಯಾದ ಪತನ ಆರಂಭವಾಯ್ತು.
ಕೇವಲ 34 ರನ್ ಗಳ ಅಂತರದಲ್ಲಿ ಭಾರತ ಕ್ರಿಕೆಟ್ ತಂಡ 8 ವಿಕೆಟ್ ಕಳೆದುಕೊಂಡಿತ್ತು.
ಅಂತಿಮವಾಗಿ ಟೀಂ ಇಂಡಿಯಾ 19.3 ಓವರ್ ಗಳಲ್ಲಿ 152 ರನ್ ಗಳಿಗೆ ಆಲೌಟ್ ಆಯ್ತು.
ಇದರೊಂದಿಗೆ ಆಸ್ಟ್ರೇಲಿಯಾ ಬಂಗಾರಕ್ಕೆ ಕೊರಳೊಡ್ಡಿದ್ರೆ, ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಡೆದುಕೊಳ್ತು.








