ಇಂದೋರ್ ಪೊಲೀಸರ ವೆಬ್ಸೈಟ್ ಹ್ಯಾಕ್ – ಪಾಕ್ ಶ್ಲಾಘಿಸಿ , ಮೋದಿ ವಿರುದ್ಧ ಆಕ್ಷೇಪಾರ್ಹ ವಿಷಯ ಪೋಸ್ಟ್
ಇಂದೋರ್ ಪೊಲೀಸರ ವೆಬ್ಸೈಟ್ ಹ್ಯಾಕ್ ಮಾಡಿರುವ ಹ್ಯಾಕರ್ಗಳು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ವಿಷಯವನ್ನು ಪ್ರಕಟಿಸಿದ್ದಾರೆ. ಹೌದು ಈ ಹ್ಯಾಕರ್ ಗಳು ಪಾಕಿಸ್ತಾನವನ್ನು ಶ್ಲಾಘಿಸಿ, ‘ಮುಕ್ತ ಕಾಶ್ಮೀರ’ ಎಂಬ ಬರಹವನ್ನು ಪೋಸ್ಟ್ ಮಾಡಿದ್ದಾರೆ. ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳ ವಿವರಗಳು, ಹುದ್ದೆಗಳು ಮತ್ತು ದೂರವಾಣಿ ಸಂಖ್ಯೆಗಳನ್ನು ಹೊಂದಿರುವ ವೆಬ್ಸೈಟ್ ಹ್ಯಾಕ್ ಆಗಿದೆ.. ‘ನಮ್ಮನ್ನು ಸಂಪರ್ಕಿಸಿ’ ವಿಭಾಗದ ಮೇಲೆ ಹ್ಯಾಕರ್ಸ್ಗಳು ಸೈಬರ್ ದಾಳಿ ನಡೆಸಿದ್ದಾರೆ.
ಬರೀ ಒಣ ಪ್ರಚಾರ, ಲಸಿಕೆ ಎಲ್ಲಿ : ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ
ಅಧಿಕಾರಿಗಳ ಪ್ರಕಾರ, ವೆಬ್ಸೈಟ್ನಲ್ಲಿ ‘ಮುಹಮ್ಮದ್ ಬಿಲಾಲ್ ಟೀಮ್ ಪಿಸಿಇ’ ಸಂದೇಶ ಬರೆಯುವ ಮೂಲಕ ಅದನ್ನು ತಾವೇ ಹ್ಯಾಕ್ ಮಾಡಿರುವುದಾಗಿ ಹ್ಯಾಕರ್ಸ್ಗಳು ಹೇಳಿಕೊಂಡಿದ್ದಾರೆ. ಇಂದೋರ್ ಪೊಲೀಸ್ ವೆಬ್ಸೈಟ್ ಅನ್ನು ನಗರ ಅಪರಾಧ ವಿಭಾಗವು ನಿರ್ವಹಿಸುತ್ತದೆ. ವೆಬ್ಸೈಟ್ ಅನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಲು ತಾಂತ್ರಿಕ ತಜ್ಞರ ಸಹಾಯದಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರಸಾದ್ ಪರಾಶರ್ ತಿಳಿಸಿದ್ದಾರೆ.