ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಗೆ ಒಲಿದ ‘ಮಾಸ್ಟರ್ ಶೆಫ್ ಆಸ್ಟ್ರೇಲಿಯಾ’ ಪ್ರಶಸ್ತಿ
ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಅವರು ಕುಕ್ಕಿಂಗ್ ಶೋ ‘ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ’ ಸೀಸನ್ 13ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ‘ಮಾಸ್ಟರ್ ಶೆಫ್ ಆಸ್ಟ್ರೇಲಿಯಾ’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.. ಗೆಲುವಿನ ನಂತರ, ಅವರು ತಮ್ಮಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಷ್ಟೇ ಅಲ್ಲ ಮಾಸ್ಟರ್‌ಶೆಫ್ ಟ್ರೋಫಿಯೊಂದಿಗೆ ಜಸ್ಟಿನ್ 250,000 ಯುಎಸ್ ಡಾಲರ್ ( ಸುಮಾರು ರೂ 1.86 ಕೋಟಿ) ನಗದು ಬಹುಮಾನವನ್ನೂ ತಮ್ಮದಾಗಿಸಸಿಕೊಂಡಿದ್ದಾರೆ. ಜಸ್ಟಿನ್ ಗೆಲುವಿನ ಸುದ್ದಿಯನ್ನು ‘ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ’ದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿಯೂ ಪ್ರಕಟಿಸಲಾಗಿದೆ. ವೃತ್ತಿಯ ಕೊನೆಯ ಸುತ್ತಿನಲ್ಲಿ ಇನ್ನೊಬ್ಬ ಭಾರತೀಯ ಸ್ಪರ್ಧಿ ದೀಪೇಂದರ್ ಚಿಬ್ಬರ್ ಕೂಡ ಇದ್ದರು. ಅಷ್ಟೇ ಅಲ್ಲ ಅಂತಿಮವಾಗಿ ವಿಜೇತರನ್ನ ಘೋಷಣೆ ಮಾಡುವ ಸಂದರ್ಭದಲ್ಲಿ ಜಸ್ಟಿನ್ , ಜಡ್ಜಸ್ , ಆಡಿಯನ್ಸ್ ಹಾಗೂ ಇತರೇ ಸ್ಪರ್ಧಿಗಳು ಪ್ರತಿಕ್ರಿಯೆಗಳು ಮತ್ತು ಆ ಕ್ಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ..