cyber crime : ಅಪರಿಚಿತ ಮೆಸೇಜ್ ನಿಂದ ಬ್ಲಾಕ್ ಮೇಲ್ಗೆ ಒಳಗಾದ ಮಹಿಳೆ
ವಿಜಯಪುರ : ಅಪರಿಚಿತ ಮೆಸೇಜ್ ನಿಂದ ಮಹಿಳೆ ಬ್ಲಾಕ್ ಮೇಲ್ಗೆ ಒಳಗಾದ ಘಟನೆ ವಿಜಯಪುರದಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿ ಮೆಸೇಜ್ ಗೆ ರಿಫ್ಲೇ ಮಾಡಿ ಮಹಿಳೆ ಸಂಕಷ್ಟ ತಂದುಕೊಂಡಿದ್ದರು. ಮೆಸೇಜ್ ಮೂಲಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.
ಈ ನಡುವೆ ಮಹಿಳೆಯನ್ನ ಮದುವೆಯಾಗುವುದಾಗಿ ಆತ ನಂಬಿಸಿದ್ದಾನೆ.. ಆರೋಪಿ ಜೊತೆ ವಿಡಿಯೋ ಕಾಲ್ ನಲ್ಲಿ ಮಹಿಳೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ನಗ್ನ ವಿಡಿಯೋ ಮತ್ತು ಪೋಟೊ ಕಳಿಸುವಂತೆ ಆರೋಪಿ ಒತ್ತಾಯಿಸಿದ್ದ ಎನ್ನಲಾಗಿದೆ. ಮಹಿಳೆ ಆರೋಪಿ ಮಾತು ನಂಬಿ ನಗ್ನ ಪೋಟೋ ಮತ್ತು ವಿಡಿಯೋ ಕಳಿಸಿದ್ದರು.
ಬಳಿಕ ವಿಡಿಯೋ ಮತ್ತು ಪೋಟೋ ಪೇಸ್ ಬುಕ್ ನಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.. ಹಣಕ್ಕಕೆ ಬೇಡಿಕೆ ಇಟ್ಟಿದ್ದಾನೆ.. ಬ್ಲಾಕ್ ಮೇಲ್ ಗೆ ಹೆದರಿ ಮಹಿಳೆ 50 ಸಾವಿರ ಹಣ ಕಳಿಸಿದ್ದಳು ಎನ್ನಲಾಗಿದೆ..
ಇಷಷ್ಟಕ್ಕೆ ಸುಮ್ಮನಾಗದೇ ಆತ ಮತ್ತಷ್ಟು ಹಣಕ್ಕೆ ಡಿಮಾಂಡ್ ಮಾಡಿದ್ದಾನೆ.. ಕೊನೆಗೆ ಮಹಿಳೆ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ವಿಜಯಪುರ ಮೂಲದ ಪ್ರಶಾಂತ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.