Cyclone Asani | ಮುಂದಿನವಾರ ಅಪ್ಪಳಿಸಲಿದೆ ಚಂಡಮಾರುತ
ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಸ್ಥಿತಿ
ಅಸನಿ ಚಂಡಮಾರುತ ಏಳುವ ಸಾಧ್ಯತೆ
ಉತ್ತರ ಮ್ಯಾನ್ಮಾರ್ ಕಡೆಗೆ ಚಂಡಮಾರುತ
ಅಸನಿ ಎಂದರೇ ಚಂಡಮಾರುತ ಎಂದರ್ಥ
ಹಿಂದೂ ಮಹಾಸಾಗರದ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡ ಸ್ಥಿತಿ ಉಂಟಾಗಿದೆ. ಇದು ಮುಂದಿನ ವಾರದಷ್ಟೊತ್ತಿಗೆ ಮತ್ತಷ್ಟ ತೀವ್ರಗೊಳ್ಳಲಿದ್ದು, ಚಂಡಮಾರುತ ಏಳುವ ಸಾಧ್ಯತೆಗಳಿವೆ.
ಈ ಚಂಡಮಾರುತವು ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಚಂಡಮಾರುತಕ್ಕೆ ಅಸನಿ ಎಂದು ಹೆಸರಿಸಲಾಗಿದೆ. ಈ ಹೆಸರನ್ನು ಶ್ರೀಲಂಕಾ ದೇಶ ನಾಮಕರಣ ಮಾಡಿದೆ. ಅಸನಿ ಎಂದರೆ ಸಿಡಿಲು ಎಂಬ ಅರ್ಥವೂ ಇದೆ.
ಚಂಡ ಮಾರುತ ಉತ್ತರ-ವಾಯುವ್ಯದ ಕಡೆಗೆ ಚಲಿಸಿ ಬಾಂಗ್ಲಾದೇಶದ ಸಮೀಪ ತಲುಪಲಿದೆ. ಮಾರ್ಚ್ 23ರಷ್ಟರಲ್ಲಿ ಉತ್ತರ ಮ್ಯಾನ್ಮಾರ್ ಕರಾವಳಿ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಚಂಡಮಾರುತ ಅಪಾಯ ಇರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
ಹಾಗೇ ಅಂಡಮಾನ್ ದ್ವೀಪ, ಆಗ್ನೇಯ ಬಂಗಾಳ ಕೊಲ್ಲಿ ಪ್ರದೇಶದ ಜನರಿಗೂ ಎಚ್ಚರವಾಗಿರುವಂತೆ ತಿಳಿಸಲಾಗಿದೆ.
ಭಾನುವಾರದ ಸುಮಾರಿಗೆ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಒಂದು ಗಂಟೆಗೆ 70-80 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು.









