‘ಸೈನೈಡ್ ಮಲ್ಲಿಕಾ’ ಮೀಟ್ಸ್ ‘ ಸೈನೈಡ್ ಮೋಹನ್’ ತೆರೆಗೆ ಬರಲು ರೆಡಿಯಾಗ್ತಿದೆ ಕ್ರೈಂ ಸ್ಟೋರಿ!
ಒಂದು ಟೈಮ್ ನಲ್ಲಿ ದೇಶದ ಜನರಲ್ಲಿ ನಡುಕ ಹುಟ್ಟಿಸಿದ್ದ ಮಹಿಳಾ ಸೈನೈಡ್ ಕಿಲ್ಲರ್ ಮಲ್ಲಿಕಾ ಕುರಿತಾಗಿ ಸಿನಿಮಾವೊಂದು ರೆಡಿಯಾಗ್ತಿದೆ.
‘ಸೈನೈಡ್ ಮಲ್ಲಿಕಾ’ ಟೈಟಲ್ ಆದ್ರೆ ‘ಮೀಟ್ಸ್ ಸೈನೈಡ್ ಮೋಹನ್ ಟ್ಯಾಗ್ ಲೈನ್ ಇಡಲಾಗಿದೆ.
‘ಸೈನೈಡ್ ಮಲ್ಲಿಕಾ’ ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆಮೇಲೆ ಬರಲು ಸಜ್ಜಾಗ್ತಿದೆ.
ಸೈನೈಡ್ ಕಿಲ್ಲರ್ ಮಲ್ಲಿಕಾ ಮತ್ತು ಸೈನೈಡ್ ಕಿಲ್ಲರ್ ಮೋಹನ್ ಇವರಿಬ್ಬರ ಕಥೆಯನ್ನು ತೆರೆಮೇಲೆ ತರುತ್ತಿರುತ್ತಿರುವವರು ಗುರು.
ಈ ಚಿತ್ರಕ್ಕೆ ಬಂಡವಳಾ ಹೂಡುವ ಜೊತೆಗೆ ಆಕ್ಷನ್ ಹೇಳ್ತಿದ್ದಾರೆ ಗುರು.
ಇನ್ನೂ ‘ಸೈನೈಡ್ ಮಲ್ಲಿಕಾ’ ಸಿನಿಮಾದಲ್ಲಿ ನಟಿ ಸಂಜನಾ ಪ್ರಕಾಶ್ ‘ಸೈನೈಡ್ ಮಲ್ಲಿಕಾ’ ಆಗಿ ಕಾಣಿಸಿಕೊಳ್ತಿದ್ದಾರೆ.
ಇನ್ನೂ ನಿರ್ದೇಶಕ ಗುರು ಈ ಚಿತ್ರದಲ್ಲಿ ‘ಸೈನೈಡ್ ಮೋಹನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ವಿಶೇಷತೆ ಏನಂದ್ರೆ ಚಿತ್ರದಲ್ಲಿ ಕಾಲ್ಪನಿಕ ಕಥೆಯನ್ನೂ ಸಹ ಹೆಣೆಯಲಾಗಿದೆ.
ಹೌದು ಅಂದ್ರೆ ಸೈನೈಡ್ ಮಲ್ಲಿಕಾ ಹಾಗೂ ಸೈನೈಡ್ ಮೋಹನ್ ಇಬ್ಬರು ರೀಲ್ ನಲ್ಲಿ ಪರಸ್ಪರ ಭೇಟಿಯಾಗುವ ಸನ್ನಿವೇಶವಿದೆ.
ಆದ್ರೆ ರಿಯಲ್ ಲೈಫ್ ಅಲ್ಲಿ ಈ ಇಬ್ಬರೂ ಪರಸ್ಪರ ಸಂಧಿಸಿಯೇ ಇಲ್ಲ.
ಸಿನಿಮಾದಲ್ಲಿ ಈ ಇಬ್ಬರು ಕೊಲೆಗಾರರು ಭೇಟಿಯಾದಾಗ ಏನಾಗುತ್ತದೆ ಎಂಬುದನ್ನು ಕಾಲ್ಪನಿಕ ಸನ್ನಿವೇಶಗಳಲ್ಲಿ ಕಥೆ ಮೂಲಕ ತೆರೆಮೇಲೆ ತರುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕರು.
ಬುಲೆಟ್ ಪ್ರಿಯರಿಗೆ ಶಾಕ್ : ರಾಯಲ್ ಎನ್ ಫೀಲ್ಡ್ ಬೆಲೆ ಹೆಚ್ಚಳ ಸಾಧ್ಯತೆ..!
ಫೆಬ್ರವರಿ 15 ರಿಂದ ದೇಶಾದ್ಯಂತ `FASTAG’ ಕಡ್ಡಾಯ
ಸೈಬರ್ ಪ್ರಪಂಚದ ಮೇಲೆ ಕಣ್ಣಿಡಲು ಸೈಬರ್ ಕ್ರೈಮ್ ಸ್ವಯಂಸೇವಕರಾಗುವಂತೆ ಜನರಲ್ಲಿ ಸರ್ಕಾರದ ಮನವಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








