D K Shivakumar | ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ಸ್ ಗಳಾಗಬೇಕಾ..?
ಬೆಂಗಳೂರು : ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾಡ್ರ್ಸ್ ಗಳಾಗಬೇಕಾ ಎಂದು ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ಯುವಕರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅದು ಹಿಂಸಾತ್ಮಕ ರೂಪಕ್ಕೆ ತಿರುಗಿದೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಗ್ನಿಪಥ್ ಯೋಜನೆ ತಂದಿದ್ದೀರಾ ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ ಎಂದು ಪ್ರಶ್ನಿಸಿದರು.
ಅಲ್ಲದೆ ಇಷ್ಟು ವರ್ಷ ದೇಶವನ್ನು ಎಂಥೆಂತ ಸಂದರ್ಭಗಳಲ್ಲಿ ರಕ್ಷಣೆ ಮಾಡಿದ್ದಾರಲ್ಲ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ ಎಂದು ಡಿ.ಕೆ.ಶಿವಕುಮಾರ್ ಸವಾಲಾಕಿದರು.
ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾಡ್ರ್ಸ್ ಗಳಾಗಬೇಕಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.