ಜೆಡಿಎಸ್ ಕಾರ್ಯಕರ್ತನಿಗೆ ಕಪಾಳ ಮೋಕ್ಷ : ಡಿಕೆಶಿ ಹೇಳಿದ್ದೇನು..?
ಬೆಂಗಳೂರು : ಕೆ.ಎಂ ದೊಡ್ಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೆಡಿಎಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದು, ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ಡಿಕೆಶಿವಕುಮಾರ್ ವಿರುದ್ಧ ವಾಕ್ಬಾಣಗಳನ್ನು ಬಿಟ್ಟಿದೆ.
ಈ ವಿಚಾರವಾಗಿ ಇಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಆ ಹುಡುಗ ನಮ್ಮ ಹುಡುಗ. ನನಗೆ ದೂರದ ಸಂಬಂಧಿ. ನನ್ನ ಹೆಗಲ ಮೇಲೆ ಕೈ ಹಾಕೋಕೆ ಬಂದ. ಯಾರಾದ್ರು ನೋಡಿದ್ರೆ ಏನ್ ಅನ್ನುತ್ತಾರೆ ಹೇಳಿ. ಅದಕ್ಕೆ ಸ್ವಲ್ಪ ಜೋರಾಗಿ ಹೊಡೆದಿದ್ದೇನೆ. ಅವರು ನಮ್ಮ ಮನೆ ಹುಡಗರು ಇರಲಿ.
ನಾನು ಬೈದ್ರೆ ಅವನು ಬೈಕೋತಾನೆ, ಅವನು ಬೈದ್ರೆ ನಾನು ಬೈದುಕೊಳ್ತೀನಿ. ಅದು ನನ್ನ ಅವನ ಸಂಬಂಧ. ಅವನು ಕೈಹಾಕಲಿಲ್ಲ ಅಂದ್ರೆ ಕೈ ಏಕೆ ಮೇಲೆ ಬಂತು?. ಈಗ ಯಾಕೆ ಅವನ ಮೇಲೆ ಚರ್ಚೆ ಮಾಡಲಿ ಎಂದು ಹೇಳಿದರು.
ಇನ್ನು ನಾವು ತಪ್ಪು ಮಾಡುತ್ತೇವೆ, ಅವರೂ ತಪ್ಪು ಮಾಡುತ್ತಾರೆ. ನಿಮಗೇನು ಖುಷಿಗೆ ತೋರಿಸುತ್ತಿದ್ದೀರಾ. ಅವನನ್ನು ಲೀಡರ್ ಮಾಡಿ. ಅವನಿಗೂ ಮುಂದಿನ ಚುನಾವಣೆಗೆ ಟಿಕೆಟ್ ಸಿಗುವಂತೆ ಮಾಡಿ ಎಂದು ಮಾಧ್ಯಮಗಳ ವಿರುದ್ಧ ಡಿಕೆಶಿವಕುಮಾರ್ ಗರಂ ಆದರು.