ಅಮೆರಿಕಾದಲ್ಲಿ ಯುದ್ಧ ವಿಮಾನಗಳ ಡಿಕ್ಕಿ – ಪತನ….
ಅಮೆರಿಕದ ಟೆಕ್ಸಾಸ್ನಲ್ಲಿ ಎರಡು ಹಳೆಯ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಟೆಕ್ಸಾಸ್ನ ಡಲ್ಲಾಸ್ ನಗರದಲ್ಲಿ ಏರ್ ಶೋ ವೇಳೆ ಈ ಘಟನೆ ಸಂಭವಿಸಿದೆ.
ಆಕಾಶದಲ್ಲಿ ಎರಡು ಯುದ್ಧ ವಿಮಾನಗಳು ಡಿಕ್ಕಿ ಹೊಡೆಯುದು ಸ್ಥಳಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ವಿಮಾನ ಅಪಘಾತದ ತಕ್ಷಣ ತುರ್ತು ಸಿಬ್ಬಂದಿಗಳು ಅಪಘಾತದ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ಕೈಗೊಂಡಿದ್ದಾರೆ.
ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು ಬೆಲ್ ಪಿ-63 ಕಿಂಗ್ಕೋಬ್ರಾ ಮಧ್ಯಾಹ್ನ 1:20 ಕ್ಕೆ (ಸ್ಥಳೀಯ ಕಾಲಮಾನ) ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.
ಎರಡನೇ ವಿಶ್ವಯುದ್ಧದಲ್ಲಕಿ ಬಳಸಿದ ಯದ್ಧವಿಮಾನಗಳನ್ನ ಈ ಏರ್ ಶೋ ನಲ್ಲಿ ಬಳಸಲಾಗಿದೆ.
ದಿ ಬೋಯಿಂಗ್ ಕಂಪನಿಯ ಪ್ರಕಾರ, ಹೆಚ್ಚಿನ B-17 ವಿಮಾನಗಳು ವಿಶ್ವ ಸಮರ II ರ ಕೊನೆಯಲ್ಲಿ ಸ್ಕ್ರ್ಯಾಪ್ ಮಾಡಲ್ಪಟ್ಟವು, ಮತ್ತು ಕೆಲವು ಮಾತ್ರ ಉಳಿದಿವೆ ಅವುಗಳನ್ನು ಏರ್ ಶೋಗಳಲ್ಲಿ ಅಥವಾ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶಿಸಲಾಗುತ್ತದೆ.
Dallas military planes collision: Here are some other recent fatal crashes involving vintage aircraft








