“ಜೆಂಟಲ್ ಮೆನ್” ಆಗಿ ಹಿರಿತೆರೆಯಿಂದ ಕಿರುತೆರೆಗೆ ಬರುತ್ತಿದ್ದಾರೆ ಡೈನಾಮಿಕ್ ಪ್ರಿನ್ಸ್..!

1 min read

“ಜೆಂಟಲ್ ಮೆನ್” ಆಗಿ ಹಿರಿತೆರೆಯಿಂದ ಕಿರುತೆರೆಗೆ ಬರುತ್ತಿದ್ದಾರೆ ಡೈನಾಮಿಕ್ ಪ್ರಿನ್ಸ್..!

ಸ್ಟಾರ್ ನಟರು ರಿಯಾಲಿಟಿ ಶೋಗಳನ್ನ ನಡೆಸಿಕೊಡೋದು ಹೊಸ ವಿಚಾರವೇನೂ ಅಲ್ಲ.. ಇದಕ್ಕೆ ಉದಾಹರಣೆ ಅಂದ್ರೆ ಪುನೀತ್ ರಾಜ್ ಕುಮಾರ್ ಅವರ  ಕನ್ನಡದ ಕೋಟ್ಯಾಧಿಪತಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಅವರು ನಡೆಸಿಕೊಡುವ  ಬಿಗ್ ಬಾಸ್ , ರಮೇಶ್ ಅರವಿಂದ್ ಅವರ ವೀಕೆಂಡ್ ವಿತ್ ರಮೇಶ್ ಹೀಗೆ  ಇಂತಹ ರಿಯಾಲಿಟಿ ಶೋಗಳು ಸಾಕಷ್ಟು   ಜನಪ್ರಿಯತೆ ಗಳಿಸಿವೆ.. ನಿರೂಪಣೆಯ ಜೊತೆಗೆ ಅನೇಕರು ತೀರ್ಪುಗಾರರಾಗಿಯೂ ಕಾಮಿಡಿ ಶೋಗಳು , ಡ್ಯಾನ್ಸ್ , ಸಿಂಗಿಂಗ್ ಶೋಗಳಲ್ಲೂ ಕೆಲಸ ಮಾಡಿದ್ದಾರೆ… ರಕ್ಷಿತಾ , ಜಗ್ಗೇಶ್ , ಪ್ರಿಯಾಮಣಿ ಇವರೆಲ್ಲರೂ ಇದೇ ಲಿಸ್ಟ್ ನಲ್ಲಿದ್ದಾರೆ..

ಇದೀಗ ಮತ್ತೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ಹಿರಿತೆರೆಯಿಂದ ಕಿರುತೆರೆಗೆ ಬರಲು ಸಜ್ಜಾಗ್ತಾಯಿದ್ದಾರೆ.. ಕನ್ನಡದ ‘ಜೆಂಟಲ್ ಮನ್’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್  ಖಾಸಗಿ ವಾಹಿನಿಯಲ್ಲಿ ಆಯೋಜಿಸಲಾಗುತ್ತಿರುವ  ಡ್ಯಾನ್ಸ್ ಶೋಗೆ ಜಡ್ಜ್ ಆಗುವ ಆಹ್ವಾನ ಸ್ವೀಕರಿಸಿದ್ದಾರೆ ಎನ್ನಲಾಗ್ತಾಯಿದೆ..

‘ರಾಕಿ ಭಾಯ್’ ಮುಂದಿನ ಸಿನಿಮಾ ಯಾವುದು , ನಿರ್ದೇಶಕ ಯಾರು ಗೊತ್ತಾ..?

ಇನ್ನೂ ಸ್ಕಿಲ್ಸ್ ವಿಚಾರಕ್ಕೆ ಬಂದ್ರೆ ಪ್ರಜ್ವಲ್ ದೇವರಾಜ್ ಅವರು ಒಳ್ಳೆಯ ಡ್ಯಾನ್ಸರ್.. ಅಷ್ಟೇ ಅಲ್ಲ ಅವರ ಪತ್ನಿ ರಾಗಿಣಿ ಕೂಡ ಬೆಸ್ಟ್ ಡ್ಯಾನ್ಸರ್ ಅನ್ನೋದು ಗೊತ್ತಿದೆ.. ಅಲ್ಲದೇ ಇವರ ಡ್ಯಾನ್ಸ್ ಕ್ಲಾಸ್ ಕೂಡ ಇದೆ.. ಸದ್ಯ ಪ್ರೊಮೊ ಶೂಟ್‌ಗಳು ಜಾರಿಯಲ್ಲಿದ್ದು ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಪ್ರಸಾರ ಆರಂಭವಾಗಲಿದೆ. ಪ್ರಜ್ವಲ್ ದೇವರಾಜ್ ಜಡ್ಜ್ ಆಗಲಿರುವ ಡ್ಯಾನ್ಸ್ ಶೋ ಅನ್ನು ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಿರೂಪಣೆ ಮಾಡಲಿದ್ದಾರೆ. ಪ್ರಜ್ವಲ್ ದೇವರಾಜ್ ಜೊತೆಗೆ ಇನ್ನೂ ಕೆಲವರು ಜಡ್ಜ್‌ ಗಳಿರಲಿದ್ದಾರೆ. ಆದರೆ ಅವರ ಹೆಸರುಗಳು ಇನ್ನೂ ಬಹಿರಂಗವಾಗಿಲ್ಲ.prajwal devaraj

ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ ಪ್ರಜ್ವಲ್ ದೇವರಾಜ್ ನಟನೆಯ ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಹಿಂದೆ ಥಿಯೇಟರ್ ಗಳು ಪುನರಾರಂಭವಾಗಿದ್ದ ಬಿಡುಗಡೆಯಾಗಿದ್ದ ಅವರ ನಟನೆಯ “ಇನ್ಸ್ ಪೆಕ್ಟರ್ ವಿಕ್ರಮ್ “  ಹಿಟ್ ಆಗಿತ್ತು.. ಇನ್ನೂ ಪ್ರಜ್ವಲ್ ಅವರು ಮಾಫಿಯಾ, ವೀರಂ, ಠಾಕ್ರೆ ಸೇರಿ ಹಲವಾರು ಸಿನಿಮಾಗಳಲ್ಲಿ  ಅಭಿನಯಿಸುತ್ತಿದ್ದಾರೆ.. ಈ ನಡುವೆ ರಿಯಾಲಿಟಿ ಶೋಗೂ ಎಂಟ್ರಿಯಾಗ್ತಿದ್ದಾರೆ.

ಅಶ್ಲೀಲ ವಿಡಿಯೋ ಕೇಸ್ – ಪತಿಯ ಕಾನೂನು ಬಾಹಿರ ಚಟುವಟಿಗಳಲ್ಲಿ ಶಿಲ್ಪಾ ಶೆಟ್ಟಿ ಪಾಲಿದ್ಯಾ..?

BIGGBOSS 8 : ವೈಲೆಂಟ್ ಆಗಿ  ಪ್ರಶಾಂತ್ ಮೇಲೆ ಕೈ ಎತ್ತಿದ ವೈಷ್ಣವಿ..?

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd