ವಿಶ್ವದಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳ ಪಟ್ಟಿ: ಟಾಪ್ 5 ನಲ್ಲಿ ಭಾರತ..!
ನವದೆಹಲಿ : ವಿಶ್ವದಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳ ಪಟ್ಟಿ ಹೊರಬಿದ್ದಿದ್ದು, ಬಾರತಕ್ಕೆ 4ನೇ ಸ್ಥಾನ ಸಿಕ್ಕಿದೆ. ಹೌದು ಈ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ , ಎರಡನೇ ಸ್ಥಾನದಲ್ಲಿದೆ ಮತ್ತು ಅಮೆರಿಕ ಮೂರನೇ ಸ್ಥಾನ ಪಡೆದುಕೊಂಡಿದೆ.
ಅಂತರರಾಷ್ಟ್ರೀಯ ಚಾಲನಾ ಶಿಕ್ಷಣ ಕಂಪನಿ ಝುಟೊಬಿ ನಡೆಸಿದ ಅಧ್ಯಯನದ ಅನ್ವಯ ಈ ಲಿಸ್ಟ್ ನಲ್ಲಿ ಬಾರತವು 4ನೇ ಸ್ಥಾನದಲ್ಲಿದೆ. ಒಟ್ಟು 56 ದೇಶಗಳಲ್ಲಿ ಅಧ್ಯಯನ ನಡೆಸಿದ ಬಳಿಕ ಈ ವರದಿ ಬಿಡುಗಡೆ ಮಾಡಲಾಗಿದೆ.
ಪ್ರತಿ ದೇಶವನ್ನು ಐದು ಅಂಶಗಳ ಆಧಾರದ ಮೇಲೆ ವಿಶ್ಲೇಷಿಸಲಾಗಿದ್ದು, ಎಲ್ಲಾ ಐದು ಅಂಶಗಳಿಗೆ ನೀಡುವ ಅಂಕಗಳ ಸರಾಸರಿ ಮೊತ್ತವನ್ನು ತೆಗೆದುಕೊಂಡಿದ್ದು, ಹೋಲಿಕೆ ಮಾಡಿ ಡಿಪೋರ್ಟ್ ತಯಾರಿಸಲಾಗಿರುವುದಾಗಿ ಚಾಲನಾ ಶಿಕ್ಷಣ ಕಂಪನಿ ಝುಟೊಬಿಯು ಮಾಹಿತಿ ನೀಡಿದೆ.
ಅಲ್ಲದೇ 1 ಲಕ್ಷ ಜನರು ಪ್ರಯಾಣಿಸುವ ರಸ್ತೆಯಲ್ಲಿ ಮರಣ ಪ್ರಮಾಣ ಎಷ್ಟಿದೆ, ಕಾರಿನಲ್ಲಿ ಮುಂದೆ ಕುಳಿತು ಪ್ರಯಾಣಿಸುವ ಎಷ್ಟು ಮಂದಿ ಸೀಟ್ ಬೆಲ್ಟ್ ಧರಿಸಿದ್ದರು, ಮದ್ಯಸೇವಿಸಿ ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದವರ ಸಂಖ್ಯೆ ಈ ರೀತಿಯಾದ ಅಂಶಗಳನ್ನ ಆಧರಿಸಿ ಅಧ್ಯಯನದ ರಿಪೋರ್ಟ್ ತಯಾರಿಸಿರುವುದಾಗಿ ಹೇಳಿಕೊಂಡಿದೆ.
ಇನ್ನೂ ವಿಶ್ವದಲ್ಲೇ ಸುರಕ್ಷಿತ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನ, ಜಪಾನ್ ಎರಡನೇ ಸ್ಥಾನ, ಸ್ವೀಡನ್ ಮೂರನೇ ಸ್ಥಾನದಲ್ಲಿದೆ.








