1413.25 ರೂ. ಅಲ್ಲ, 1200 ರೂಪಾಯಿಗೆ ಡಿಎಪಿ ಗೊಬ್ಬರ
ಹುಬ್ಬಳ್ಳಿ : ಡಿಎಪಿ ಗೊಬ್ಬರವನ್ನು 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿ ಭರಿಸಲು ಸಿಎಂ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ ಸಿಎಂಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಹ್ಲಾದ್ ಜೋಶಿ ತಮ್ಮ ಟ್ವೀಟ್ ನಲ್ಲಿ, ದೇಶದಲ್ಲಿ ರಸಗೊಬ್ಬರಕ್ಕೆ ದಾಖಲೆಯ ಪ್ರಮಾಣದ(PerMT 2431Rs)ಸಬ್ಸಿಡಿ ನೀಡುವ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರ ಬೆನ್ನುಲೆಬಾಗಿ ನಿಂತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಈ ಹಿಂದಿನ ದರದಲ್ಲಿ ಖರೀದಿಸಿದ ಕಾಪು ದಾಸ್ತಾನು 46474.15 ಎಂಟಿ ಸಂಗ್ರಹವಿದ್ದು, ಈ ಡಿಪಿಪಿ ಗೊಬ್ಬರದ ಬೆಲೆ ರೂ1413.25 ಆಗಿದೆ
ಆದರೆ ಕೇಂದ್ರ ಸರಕಾರ ಪ್ರಕಟಿಸಿದ ಸಬ್ಸಿಡಿಯಿಂದ ಡಿಎಪಿ ದರ ಪ್ರಸಕ್ತ ಮಾರುಕಟ್ಟೆಯಲ್ಲಿ ರೂ.1200ಗೆ ದೊರೆಯುತ್ತಿದ್ದುಕಾಪು ದಾಸ್ತಾನು ಗೊಬ್ಬರ ಹೆಚ್ಚಿನ ದರ ಹೊಂದಿದ್ದರಿಂದ ರೈತರಿಗೆ ಆರ್ಥಿಕ ಹೊರೆಯಾಗಿತ್ತ.ಅನೇಕ ಜಿಲ್ಲೆಗಳಲ್ಲಿ ಹೊಸ ದರದ ಗೊಬ್ಬರ ದಾಸ್ತಾನು ಕಡಿಮೆ ಪ್ರಮಾಣದಲ್ಲಿ ಇದ್ದಿದ್ದರಿಂದ ರೈತರಿಗೆ ಗೊಬ್ಬರ ಲಭ್ಯತೆ ಸಮಸ್ಯೆಯಾಗಿತ್ತು.
ಮುಂಗಾರಿನ ಈ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳ ಉಗ್ರಾಣಗಳಲ್ಲಿರುವ ಡಿಎಪಿ ಗೊಬ್ಬರವನ್ನು ರೈತರಿಗೆ ತಕ್ಷಣ ದೊರೆಯುವಂತೆ ಮಾಡಲು ರಾಜ್ಯಸರಕಾರವು ಮಾರಾಟ ಮಂಡಳಿಗೆ ರೂ.1200 ಮೇಲಿನ ರೂ. 213.25 ಮೊತ್ತವನ್ನು ಪಾವತಿ ಮಾಡುವಂತೆ ಇಂದು ಮುಖ್ಯಮಂತ್ರಿಗಳಾದ ಶ್ರೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಪರವಾಗಿ ದೂರವಾಣಿ ಮೂಲಕ ವಿನಂತಿಸಿದ್ದೆ.
ರೈತರ ಪರ ಸ್ಪಷ್ಟ ಕಾಳಜಿ ಹೊಂದಿರುವ ಯಡಿಯೂರಪ್ಪನವರು ತಕ್ಷಣವೇ ಕೃಷಿ, ಸಹಕಾರ ಹಾಗೂ ಹಣಕಾಸು ಇಲಾಖೆಯಿಂದ ಮಾಹಿತಿ ಪಡೆದು ವಿವಿಧ ಜಿಲ್ಲೆ ಉಗ್ರಾಣಗಳಲ್ಲಿರುವ ಕಾಪು ದಾಸ್ತಾನು ಡಿಎಪಿ ಗೊಬ್ಬರವನ್ನು ರೂ. 1413.25 ರ ಬದಲಾಗಿ ರೂ1200 ನಂತೆ ನಾಳೆಯಿಂದಲೇ ರೈತರಿಗೆ ಒದಗಿಸಲು ಆದೇಶಿಸಿದ್ದಾರೆ
ಹೆಚ್ಚುವರಿ ಹಣವನ್ನು ಸರಕಾರದಿಂದ ಮಾರಾಟ ಮಂಡಳಿಗೆ ಭರಿಸಲು ಆದೇಶಿಸಿದ್ದಾರೆ. ಇದು ಒಬ್ಬ ರೈತನಾಯಕ ರೈತರ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.