ವಾಟ್ಸಾಪ್ ಡಾರ್ಕ್ ಮೋಡ್ ಮೆಸೇಜಿಂಗ್ ಅಪ್ಲಿಕೇಶನ್‌ಗಾಗಿ ಹೊಸ ವಿನ್ಯಾಸವಾಗಿದ್ದು, ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಈ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.
ಇದು ರಾತ್ರಿಯಲ್ಲಿ ಮೊಬೈಲ್ ಸ್ಕ್ರೀನ್ ಅನ್ನು ಮಂದ ಬೆಳಕಿನಲ್ಲಿ ಪ್ರಜ್ವಲಿಸಿ, ಕಣ್ಣುಗಳಿಗೆ ದಣಿವಾಗದಂತೆ ನೆರವಾಗುತ್ತದೆ. ಅಕ್ಷರಗಳನ್ನು ಓದಲು, ಚಿತ್ರಗಳನ್ನು ನೋಡಲು ಶ್ರಮವಾಗದ ರೀತಿಯಲ್ಲಿ ಈ ಸವಲತ್ತನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಕತ್ತಲಿನ ಕೋಣೆಯಲ್ಲಿ ಯಾವುದೋ ಕಾರಣಕ್ಕೆ ಫೋನ್ ಸ್ಕ್ರೀನ್ ಆನ್ ಆದರೂ ಝಗ್ಗನೆ ಕೋರೈಸುವ ಬೆಳಕು ಕೋಣೆಯನ್ನು ಬೆಳಗುವುದಿಲ್ಲ. ಅಲ್ಲದೆ ಮೊಬೈಲ್ ನನ್ನು ದೀರ್ಘಕಾಲದವರೆಗೆ ಅಥವಾ ರಾತ್ರಿಯಲ್ಲಿ ನೋಡಲು ಸುಲಭವಾಗುವುದು.
ಕೆಲವೊಂದು ಸಂದರ್ಭಗಳಲ್ಲಿ ಫೋನು ತನ್ನಷ್ಟಕ್ಕೇ ಡಾರ್ಕ್ ಮೋಡ್‌ಅನ್ನು ಅಳವಡಿಸಿಕೊಂಡಿರಬಹುದು. ಇಲ್ಲದೇ ಹೋದರೆ ಅದನ್ನು ಬಳಕೆದಾರ ಖುದ್ದಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಮೊದಲು ವಾಟ್ಸ್ ಆ್ಯಪ್ ನ ಇತ್ತೀಚಿನ ನವೀಕರಣವನ್ನು ಸ್ವೀಕರಿಸಿ.
ನಂತರ ವಾಟ್ಸಾಪ್ ತೆರೆಯಿರಿ. ಮೇಲಿನ ಬಲ ಮೂಲೆಯಲ್ಲಿರುವ ಮೂರು ಲಂಬ ಚುಕ್ಕೆಗಳನ್ನು ಒತ್ತಿರಿ,
ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿ. ಚಾಟ್ಸ್ ಅನ್ನು ಕ್ಲಿಕ್ ಮಾಡಿ.
ನಂತರ ಥೀಮ್ ಆರಿಸಿ, ಈಗ ಡಿಫಾಲ್ಟ್, ಡಾರ್ಕ್ ಮೋಡ್ ಮತ್ತು ಲೈಟ್ ಮೋಡ್ ಎಂಬ ಆಯ್ಕೆಯಲ್ಲಿ ಡಾರ್ಕ್ ಮೋಡ್ ಆರಿಸಿ.
ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ
ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...








